STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಒಲವಿನ ಬಣ್ಣ

ಒಲವಿನ ಬಣ್ಣ

1 min
203

ಅಂದು ಹೋಲಿ. ಒಂದು ವಾರದಿಂದಲೇ ಆ ಕಾಲೋನಿಯಲ್ಲಿ ಸಡಗರ ಸಂಭ್ರಮಗಳು ಶುರುವಾಗಿತ್ತು. .ಎಲ್ಲರ ಮನೆಯ ಮುಂದೆ ಬಣ್ಣ ತುಂಬಿದ ಬಕೆಟ್ ಗಳು. ಮನೆಗೆ ಬಣ್ಣ ಬಣ್ಣದ ತೋರಣಗಳು.ಎಲ್ಲರೂ ಬಿಳಿ ಬಣ್ಣದ ಉಡುಪು ಗಳನ್ನು ಧರಿಸಿ, ಕಿರಿಯರಿಂದ ಹಿರಿಯರವರೆಗೂ ತಮ್ಮ ತಮ್ಮ ಮನೆಯ ಹೊರಗೆ ಬಂದರು. 


"ರಂಗ್ ಭರಸೇ"ಹಾಡು ಶುರುವಾಯಿತು. ಒಬ್ಬರಿಗೊಬ್ಬರು ಬಣ್ಣದ ಓಕುಳಿಯನ್ನು ಎರಚಾಡುತ್ತಾ ಎಲ್ಲರೂ ಡ್ಯಾನ್ಸ್ ಮಾಡುತ್ತಾ ಸಂತೋಷದಿಂದ ತಮ್ಮನ್ನು ತಾವು ಮೈ ಮರೆತಿದ್ದರು.


ಆ ಕಾಲೋನಿಯಲ್ಲಿದ್ದ ಶುಭಾಂಗಿ ಮಾತ್ರ ಮನೆಯೊಳಗೆ ಕುಳಿತು, ಕಿಟಕಿಯಿಂದ ಎಲ್ಲವನ್ನೂ ನೋಡುತ್ತಾ ಇದ್ದಾಗ, ಅವಳಿಗೆ ತನ್ನ ಜೀವನದಲ್ಲಿ ಅಳಿಸಿ ಹೋಗಿದ್ದ ತನ್ನ ಒಲವಿನ ರಂಗು ರಂಗಿನ

 ಬಣ್ಣಗಳನ್ನು ನೆನಪಿಸಿಕೊಳ್ಳುತ್ತಾ , ಅಳುತ್ತಾ ಕುಳಿತಿದ್ದಳು. 

'ಈಗೆರಡು ವರ್ಷಗಳ ಹಿಂದೆ ಇದೇ 

 ಹೋಲಿ ಹಬ್ಬದಂದೇ ಅಲ್ಲವೆ , ತನ್ನ ಗಂಡ ಶೀತಲ್ ನನ್ನು ಕಳೆದುಕೊಂಡಿದ್ದು, ತನ್ನ ಒಲವಿನ ಬಣ್ಣವನ್ನು ಕಳೆದುಕೊಂಡು, ಬಿಳಿಯ ಬಣ್ಣವನ್ನು ಅಪ್ಪಿಕೊಂಡಿದ್ದು,.. ಇನ್ನು ತನ್ನ ಜೀವನದಲ್ಲಿ ರಂಗಿನ ಓಕುಳಿ ಆಟವಾಡುವವರೇ ಇಲ್ಲದ ಮೇಲೆ ,ತನಗೆಲ್ಲಿಯ ಹೋಲಿ?,'

ಶುಭಾಂಗಿ ಒಬ್ಬಳೇ ಕುಳಿತು ಕಣ್ಣೀರು ಹಾಕುತ್ತಾ ಇದ್ದಾಗ, ಅವಳ ಭುಜದ ಮೇಲೆ ಯಾರೋ ಕೈ ಇಟ್ಟಂತಾಗಿ ಹಿಂದಿರುಗಿ ನೋಡಿದಳು. 

ಅವಳ ಮೂರು ವರ್ಷದ ಮಗ ಹರ್ಷ,

ಅವಳ ಸೆರಗು ಹಿಡಿದು ಎಳೆಯುತ್ತಾ, ಇದ್ದ.

ಮಗನ ಮುಖವನ್ನು ನೋಡಿದ ಶುಭಾಂಗಿ, ತನ್ನ ನೋವನ್ನು ಮರೆತು, ಮಗುವಿನೊಂದಿಗೆ ಮಗುವಾಗಿ

ಹೋಲಿಯಲ್ಲಿ ಪಾಲ್ಗೊಂಡಳು.ಬಣ್ಣದ ಓಕುಳಿ ಆಟ ಮುಗಿದು ಮಗುವಿನ ಜೊತೆ ಮನೆಗೆ ಬಂದಾಗ,ಅವಳ ಮನಸ್ಸಿನ ದುಗುಡವೆಲ್ಲಾ

ಕಳೆದು ಹೋಗಿ, ಅವಳ ಮನಸ್ಸು ಹಗುರವಾಯಿತು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract