STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ನೃತ್ಯ ಪಟು

ನೃತ್ಯ ಪಟು

1 min
295

ಎಂಟು ವರ್ಷದ ಲಾಸ್ಯ‌ ತನ್ನ ಅಮ್ಮನ ಹತ್ತಿರ ಬಂದು ತಾನು ಡ್ಯಾನ್ಸ್ ಗೆ ಸೇರಿಕೊಳ್ಳುತ್ತೇನೆ, ತನ್ನನ್ನು ಡ್ಯಾನ್ಸ್ ಕ್ಲಾಸ್ ಗೆ ಸೇರಿಸಮ್ಮ ಅಂತ ಒಂದೇ ಸಮನೇ ಹಠ ಮಾಡುತ್ತಿದ್ದಳು.ಸಂಪ್ರದಾಯಸ್ಥ ಕುಟುಂಬದ ಅವಳ ಅಪ್ಪ ಮಗಳನ್ನು ಡ್ಯಾನ್ಸ್ ಗೆ ಸೇರಿಸಲು ಬಿಲ್ಕುಲ್ ಒಪ್ಪಲಿಲ್ಲ. ಕಡೆಗೆ ಲಾಸ್ಯಳ ಅಮ್ಮ ವಲ್ಲಿದೇವಿಗೆ ಮಗಳ ಕಣ್ಣೀರನ್ನು ನೋಡಲಾಗಲಿಲ್ಲ. ಆದರೆ ಗಂಡನ ಮಾತನ್ನು ಮೀರುವಂತಿಲ್ಲ. ತುಂಬಾ ಧರ್ಮ ಸಂಕಟಕ್ಕೆ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಳು.

ಒಂದು ದಿನ ಲಾಸ್ಯಳ ಒತ್ತಾಯ ತಡೆಯಲಾರದೇ ನೃತ್ಯ ಶಾಲೆ ಗೆ ಅವಳ ಜೊತೆ ಹೋದಳು. ಅಲ್ಲಿ ಸುಮಾರು ಮಂದಿ ಹೆಂಗಸರು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದರು. ಲಾಸ್ಯ ತನ್ನ ಅಮ್ಮನ ಜೊತೆ ಒಂದು ಕಡೆ ಕುಳಿತು ಬೇರೆ ಹುಡುಗಿಯರು ಮಾಡುವ ನೃತ್ಯ ಗಳನ್ನು ಗಮನಿಸುತ್ತಿದ್ದಳು. ಎಲ್ಲರೂ ನೃತ್ಯ ಮಾಡಿದ ನಂತರ, ತಾನು ಎದ್ದು ನಿಂತು ಎಲ್ಲರೆದುರಿಗೆ ಧೈರ್ಯದಿಂದ ಬೇರೆಯವರಿಗೆ ಹೇಳಿಕೊಡುತ್ತಿದ್ದ ನೃತ್ಯ ದ ಭಂಗಿಗಳನ್ನು ಯಥಾವತ್ತಾಗಿ ಮಾಡಿ ತೋರಿಸಿದಾಗ, ಅಲ್ಲಿ ನೆರೆದಿದ್ದ ಎಲ್ಲರಿಗೂ ವಿಶೇಷವಾಗಿ ನೃತ್ಯ ಗುರುಗಳಿಗೆ ಇವಳ ಪ್ರತಿಭೆಯನ್ನು ಕಂಡು ಸಂತಸವಾಯಿತು.


ಅವರ ಒತ್ತಾಯಕ್ಕೆ ಮಣಿದು ವಲ್ಲೀದೇವಿ ಲಾಸ್ಯಳನ್ನು ನೃತ್ಯ ಶಾಲೆಗೆ ಸೇರಿಸಿದಳು. ಗಂಡನಿಂದ ವಿಷಯವನ್ನು ಮುಚ್ಚಿಟ್ಟು ಹೇಗೋ ಸಂಭಾಳಿಸುತ್ತಿದ್ದಳು.

ಒಂದು ದಿನ ಆ ನೃತ್ಯ ಶಾಲೆಯ ನೃತ್ಯ ಮೇಳದಲ್ಲಿ ಲಾಸ್ಯಳ ನೃತ್ಯ ವೇದಿಕೆಯಲ್ಲಿ ಇತ್ತು. ಆ ದಿನ ಮನೆಯಲ್ಲಿ ತಂದೆಗೆ ನಮಸ್ಕರಿಸಿ ವೇದಿಕೆಯಲ್ಲಿ ನೃತ್ಯ ಮಾಡಿದಳು ಲಾಸ್ಯ .ಅವಳು ನೃತ್ಯವನ್ನು ಹೊಗಳಿ ವೃತ್ತಪತ್ರಿಕೆಗಳು ಸುದ್ದಿ ಮಾಡಿದಾಗ, ಲಾಸ್ಯ ಳ ಅಪ್ಪ ನಿಗೆ ವಿಷಯ ತಿಳಿದು , ಮನೆಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಯಿತು. 


ಒಂದು ದಿನ ಲಾಸ್ಯಳ ಮನೆಗೆ ಅವಳ ಗುರುಗಳು ಬಂದು ಲಾಸ್ಯಳ ತಂದೆಯ ಹತ್ತಿರ ಮಾತನಾಡಿ ಅವರನ್ನು ಸಮಾಧಾನ ಪಡಿಸಿ ,'ನೃತ್ಯವೆನ್ನುವುದು ಒಂದು ಕಲೆ, ಅದರಲ್ಲಿ ನಿಮ್ಮ ಮಗಳು ಲಾಸ್ಯಳಿಗೆ ಅದ್ಭುತ ಸಾಧನೆ ಮಾಡುವ ಒಳ್ಳೆಯ ಭವಿಷ್ಯವಿದೆ, ಆ ಮಗುವಿಗೆ ಪ್ರೋತ್ಸಾಹ ನೀಡಿ"ಎಂದು ಹೇಳಿ ಲಾಸ್ಯ ಳ ತಂದೆಯನ್ನು ಒಪ್ಪಿಸಿದರು.ಗುರುಗಳ ಮಾತಿಗೆ ಬೆಲೆ ಕೊಟ್ಟ ಲಾಸ್ಮಳ ತಂದೆ,ಮಗಳನ್ನು ನೃತ್ಯದಲ್ಲಿ ಮುಂದುವರಿಯಲು ಒಪ್ಪಿಗೆ ನೀಡಿದರು.


ಮುಂದೆ ಲಾಸ್ಯ ಹೆಸರಾಂತ ಭರತನಾಟ್ಯ ಪ್ರವೀಣೆಯಾಗಿ ದೇಶ ವಿದೇಶಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಾ ಬಂದಾಗ, ಮಗಳ ಏಳಿಗೆಯನ್ನು ಕಂಡು ಲಾಸ್ಯಳ ಅಪ್ಪ ಅಮ್ಮನಿಗೆ ತುಂಬಾ ಸಂತೋಷವಾಯಿತು. ಮಗಳ ಬಗ್ಗೆ ಅಭಿಮಾನದಿಂದ ಬೀಗಿದರು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract