ನೆರಳು ಬೆಳಕು
ನೆರಳು ಬೆಳಕು
ಮಧ್ಯ ರಾತ್ರಿ ಒಂದು ಗಂಟೆ. ಇಡೀ ನಗರ ಆಗತಾನೆ ಮಲಗಿದೆ. ಕಾಳಸಂತೆಕೋರರು ತಮ್ಮ ಕೆಲಸ ಪ್ರಾರಂಭಿಸಿ, ಸಾಹುಕಾರರ ಮನೆಗೆ ಕನ್ನ ಹಾಕಿ, ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಮನೆಯ ಪೈಪ್ ಗೆ ಕಟ್ಟಿದ್ದ ಹಗ್ಗವನ್ನು ಹಿಡಿದು
ಮೆಲ್ಲಗೆ ಇಳಿಯುವಾಗ ಬೀದಿಯ ದೀಪಗಳ ಬೆಳಕಿನಲ್ಲಿ
ಬೀಟ್ ಪೋಲೀಸ್ ನ ಅತಿಥಿಗಳಾಗಿ, ಸೂರ್ಯ ಮೂಡುವ ಹೊತ್ತಿಗೆ ಸರಿಯಾಗಿ, ಕಳ್ಳರೆಲ್ಲರೂ
ಜೈಲ್ ಕಂಬಿ ಎಣಿಸುತ್ತಿರುತ್ತಾರೆ.
ಆದರೆ ತಮ್ಮ ಚಿನ್ನ ಹಣ ಇತ್ಯಾದಿಗಳನ್ನು ರಾತ್ರಿಯ ನೆರಳಿನಲ್ಲಿ ಕಳೆದುಕೊಂಡವರು , ಸೂರ್ಯನ ಬೆಳಕು ಶುಭವಾಗಿ, ಶುಭೋದಯವಾಗುತ್ತದೆ. ಎಲ್ಲರೂ ಸಂತೋಷದಿಂದ ಬಾಲಸೂರ್ಯನನ್ನು ಸ್ವಾಗತಿಸುತ್ತಾರೆ.
