STORYMIRROR

ಭವ್ಯ ಟಿ.ಎಸ್.

Romance Inspirational Others

4  

ಭವ್ಯ ಟಿ.ಎಸ್.

Romance Inspirational Others

ಮುರಿದ ಮನಸ್ಸುಗಳ ನಡುವೆ

ಮುರಿದ ಮನಸ್ಸುಗಳ ನಡುವೆ

2 mins
376

ಅಂದು ದೀಪಾ ತುಂಬಾ ಸಂಭ್ರಮದಿಂದ ಮನೆಗೆ

ಬಂದಿದ್ದಳು."ಅತ್ತೆ....ಭರತ್..ಶಾಂತಿ.. ತಗೊಳ್ಳಿ ಸಿಹಿ;

ಕೊನೆಗೂ ನಾನು ಪಿ.ಎಚ್. ಡಿ. ಪದವೀಧರೆಯಾದೆ

ನನ್ನ ಎಷ್ಟೋ ವರ್ಷಗಳ ಕನಸು ಇಂದು ನನಸಾಗಿದೆ"

ಎನ್ನುತ್ತಾ ತನ್ನ ಸಾಧನೆಯ ಸಂತಸವನ್ನು ಹಂಚಿಕೊಂಡಳು.ಮನೆಯವರೆಲ್ಲರ ಮೊಗದಲ್ಲಿ

ಮಂದಹಾಸ ಮೂಡಿತು.ತನ್ನ ಪತಿ ಶರತ್ ಬಂದ

ಕೂಡಲೇ ಈ ವಿಷಯ ತಿಳಿಸಿ ಅವನಿಗೂ ತನ್ನ

ಕೈಯಾರೆ ಸಿಹಿ ತಿನಿಸುವ ಹಂಬಲದಲ್ಲಿ ಒಳಹೋದಳು.

ಶರತ್ ಬಂದಾಗ ಹೇಗೆ ಅವನಿಗೆ ಈ ಸಿಹಿ ಸುದ್ದಿ

ಹೇಳಲಿ ಎಂದೆಲ್ಲಾ ಮನದಲ್ಲಿ ಆಲೋಚಿಸುತ್ತಾ

ಕೈ ಕಾಲು ತೊಳೆದು ಬಂದು ಹಾಸಿಗೆಯಲ್ಲಿ ಒರಗಿದಳು.

ಹಾಗೇ ಕಣ್ಣು ಮುಚ್ಚಿದಾಗ ತಾನು ಮದುವೆಯ

ನಂತರವೂ ಓದಬೇಕು ಎಂದು ಹುಡುಗಿ ನೋಡಲು

ಬಂದ ದಿನ ಶರತ್ ಗೆ ತಿಳಿಸಿದ್ದು,ಅದಕ್ಕೆ ಅವನು

ಒಪ್ಪಿಗೆ ಸೂಚಿಸಿದ್ದು,ಆಮೇಲೆ ಮದುವೆಯ ಸಿಹಿ

ಪುಳಕಗಳನ್ನೆಲ್ಲಾ ಬದಿಗಿರಿಸಿ ತಾನು ಪಿ.ಎಚ್. ಡಿ

ಅಧ್ಯಯನದಲ್ಲಿ ಮಗ್ನಳಾಗಿದ್ದು ನೆನಪಾಯಿತು.

ಇನ್ನಾದರೂ ಸ್ವಲ್ಪ ದಿನ ಶರತ್ ಜೊತೆಯಲ್ಲಿ

ಹಾಯಾಗಿ ಸಮಯ ಕಳೆಯಬೇಕು,ಹೆಂಡತಿಯಾಗಿ

ಅವನ ಮನಸ್ಸಿಗೆ ಹತ್ತಿರವಾಗಬೇಕು ಎಂಬ

ಭಾವಗಳೆಲ್ಲಾ ಮೂಡಿ ರೋಮಾಂಚಿತಳಾದಳು.

ಶರತ್ ಬರುವಾಗ ರಾತ್ರಿ ಹತ್ತಾಗಿತ್ತು.ಕಛೇರಿಯ

ಕೆಲಸದ ಒತ್ತಡ ಅವನ ಮುಖದ ಮೇಲೆ ಎದ್ದು

ಕಾಣುವಂತಿತ್ತು.ದೀಪಾ ಬಂದ ಕೂಡಲೇ ಅವನಿಗೆ

ನೀರು ಕೊಟ್ಟಳು."ನೀನು ಯಾವಾಗ ಬಂದೆ?"

ಅವನ ಪ್ರಶ್ನೆಯಲ್ಲಿ ಸಂಭ್ರಮದ ಬದಲಾಗಿ

ಒಂದು ರೀತಿಯ ಉದಾಸೀನವಿತ್ತು.

ಮದುವೆಯ ನಂತರ ದೀಪಾ ಓದುವ ಕಾರಣಕ್ಕೆ

ಬಹಳ ಸಮಯ ತವರಿನಲ್ಲೇ ಉಳಿದಿದ್ದಳು.

ಗಂಡನ ಮನೆಗೆ ಅಪರೂಪದ ಅತಿಥಿಯಾಗಿದ್ದಳು.

ಇದು ಮೇಲ್ನೋಟಕ್ಕೆ ಶರತ್ ನಲ್ಲಿ ಕಾಣಿಸದಿದ್ದರೂ

ಮನದ ಯಾವುದೋ ಮೂಲೆಯಲ್ಲಿ ಹತಾಶೆಗೆ

ಕಾರಣವಾಗಿತ್ತು.ತಾನು ಒಬ್ಬ ಸಾಮಾನ್ಯ ಹುಡುಗಿ

ಯನ್ನು ಮದುವೆ ಆಗಬೇಕು. ಆಕೆ ನನಗೆ ಒಳ್ಳೆಯ

ಹೆಂಡತಿ,ಮನೆಗೆ ಒಳ್ಳೆಯ ಸೊಸೆ,ಪ್ರೀತಿಯ ಅತ್ತಿಗೆ

ಆಗಬೇಕು ಎಂದೆಲ್ಲಾ ಕನಸು ಕಂಡಿದ್ದನು.

ಆದರೆ ಅಮ್ಮ ,ಓದಿದ ಹುಡುಗಿಯಾದರೆ ನಿನ್ನ

ಜವಾಬ್ದಾರಿಯಲ್ಲಿ ಸ್ವಲ್ಪ ಹಂಚಿಕೊಳ್ಳುತ್ತಾಳೆ..

ಅವಳೂ ಕೆಲಸಕ್ಕೆ ಸೇರಿದರೆ ಮನೆಯ ಕಷ್ಟಗಳಿಗೆ

ಆಧಾರವಾಗುತ್ತಾಳೆ ಎಂದು ತನ್ನ ಸಂಬಂಧದಲ್ಲಿ

ಚೆನ್ನಾಗಿ ಓದುತ್ತಿದ್ದ ದೀಪಾಳನ್ನು ಸೊಸೆ ಮಾಡಿ

ಕೊಳ್ಳಲು ಬಯಸಿದ್ದರು.ಅವರ ಆಸೆಯಂತೆ

ಶರತ್ ದೀಪಾಳಿಗೆ ಹೆಚ್ಚು ಓದಲು ಅವಕಾಶ

ನೀಡಿದ್ದ.

ದೀಪಾಳಿಗೆ ಉನ್ನತ ಹುದ್ದೆಯೂ ಸಿಕ್ಕಿತು.ಆದರೆ

ಶರತ್ ಬಯಸಿದ್ದ ತನ್ನ ಮನೆ ಮನಗಳ ತುಂಬಿ

ಒತ್ತಡದ ಬದುಕಿಗೊಂದಿಷ್ಟು ಸಾಂತ್ವನದ ತಂಪ

ನೀಡುವ ಸರಳ ಗೃಹಿಣಿ ತನ್ನ ಸಂಗಾತಿಯಾಗ

ಬೇಕೆಂಬ ಕನಸು ಕನಸಾಗಿಯೇ ಉಳಿದಿತ್ತು.

ತನ್ನೆಲ್ಲಾ ಸಾಧನೆಗಳನ್ನು ತನಗಿಂತ ಹೆಚ್ಚು

ಸಂಭ್ರಮಿಸುವವ ತನ್ನ ಪತಿಯಾಗಬೇಕೆಂಬ

ದೀಪಾಳ ಆಸೆಯೂ ಕಮರಿತ್ತು.

ಇಲ್ಲಿ ಯಾರು ಸರಿ,ಯಾರು ತಪ್ಪು ಎಂಬ

ಜಿಜ್ಞಾಸೆಗಿಂತ ಮನದ ಆಸೆಗಳು,ನಿರೀಕ್ಷೆಗಳು

ತನಗಷ್ಟೇ ಸೀಮಿತವಾಗಿ ಅದನ್ನು ಒತ್ತಾಯದಿಂದ

ಪಡೆಯಲು ಅಸಾಧ್ಯ ಅನಿಸುತ್ತದೆ.

ಮುರಿದ ಮನಸ್ಸುಗಳ ನಡುವೆ ಭಾವನೆಗಳ ವಿನಿಮಯವೂ ಅಸಾಧ್ಯ.

ನಮಗೆ ನಾವೇ ಮುಖ್ಯವೆಂಬುದು ಆದ್ಯತೆ ಎನಿಸಿದರೂ

ನಿರೀಕ್ಷಿತ ಮನಸ್ಸಿಗೆ ಅದು ಆಘಾತ

ತರಲೂ ಬಹುದು.

ಭಾವನೆಗಳನ್ನು ಹತ್ತಿಕ್ಕಿದಷ್ಟೂ ಮನಸ್ಸು

ನೋವಿನ ಸುಳಿಗೆ ಸಿಲುಕಿ ನಲುಗುತ್ತದೆ.

ಅನಿಸಿದ್ದನ್ನು ವ್ಯಕ್ತಪಡಿಸದೇ ಮೌನದಲ್ಲಿ

ಇನ್ನೊಬ್ಬರನ್ನು ಕೊಲ್ಲುವುದಕ್ಕಿಂತ,ಮಾತಿನ

ಹರಿತವೇ ಲೇಸು.ಬೇರೆಯವರ ಸಂತೋಷ

ಕ್ಕಾಗಿ ಇಡೀ ಬದುಕನ್ನೇ ಬಲಿಕೊಡುವ ಬದಲು

ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸರಿಯಾದ

ಸಮಯದಲ್ಲಿ ತಕ್ಕ ನಿರ್ಧಾರಗಳನ್ನು ತೆಗೆದು

ಕೊಳ್ಳುವುದೇ ಲೇಸು.ಮುರಿದ ಮನಸ್ಸಿಗೆ

ಎಷ್ಟೇ ತೇಪೆ ಹಾಕಿದರೂ ಮತ್ತೆ ಮತ್ತೆ ತನಗಾದ

ಗಾಯದ ಗುರುತನ್ನು ತೋರಿಸುತ್ತದೆ...


Rate this content
Log in

Similar kannada story from Romance