STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಮಂತ್ರದ ಮುದುಕಿ

ಮಂತ್ರದ ಮುದುಕಿ

2 mins
23



ಮಲೆನಾಡಿನ ಪ್ರಕೃತಿಯ ಮಡಿಲಲ್ಲಿರುವ  ಕೋಡಿಹಳ್ಳಿ ಒಂದು  ಪುಟ್ಟ ಹಳ್ಳಿ.  ಸುಮಾರು ಹತ್ತುಸಾವಿರಕ್ಕೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಆ ಹಳ್ಳಿ, ಹಸಿರು ಹೊದ್ದುಗೆಯನ್ನು ಹೊದ್ದು, ಜನಜಂಗುಳಿಯಿಂದ ದೂರ ಉಳಿದಿದ್ದು, ಅಲ್ಲಿಯ ಜನರು ನಗರದ ನಾಗರೀಕತೆಯಿಂದ ಸೋಂಕಿನಿಂದ ದೂರವಿದ್ದುದ್ದರಿಂದ ಅವರವರ ಮನೆತನಕ್ಕೆ ಬಂದ ಹೈನುಗಾರಿಕೆ,ವ್ಯವಸಾಯ, ತೋಟಗಾರಿಕೆಗಳನ್ನು ಮಾಡಿಕೊಂಡು ನೆಮ್ಮದಿಯಿಂದ  ಜೀವನ ನಡೆಸುತ್ತಿದ್ದರು. 

ಅಲ್ಲಿಯ ಬ್ರಾಹ್ಮಣರ ಬೀದಿಯಲ್ಲಿರುವ ಬೆರಳಣಿಕೆಯ ಮನೆಗಳಲ್ಲಿ "ಮಣೆಗಾರರ ಮನೆ" ಎಂದು ಹೆಸರು ಪಡೆದಿದ್ದ ಒಂದು ಮನೆ. ಆ ಮನೆಯಲ್ಲಿ  ಮಣೇಗಾರ ಶ್ರೀನಿವಾಸ ಪುರೋಹಿತ್ ರವರ ಅಮ್ಮ ನಂಜಮ್ಮ ಅಜ್ಜಿ. ಅವರು ಆ ಹಳ್ಳಿಗೇ ತುಂಬಾ ಹೆಸರುವಾಸಿಯಾಗಿದ್ದರು. ಬಾಲವಿಧವೆಯಾಗಿ ಆ ಕಾಲದ ಪದ್ಧತಿಯಂತೆ ಮಡಿ ಹೆಂಗಸಾಗಿ, ತಮ್ಮ ಜೀವನದ ಮುಕ್ಕಾಲು ಭಾಗ ಪರೋಪಕಾರ ಮಾಡುವುದರಲ್ಲೇ ತೃಪ್ತಿ ಹೊಂದಿದ್ದ ಅವರು, ಕೆಲವು ರೀತಿಯ ರೋಗಗಳಿಗೆ ಹಸಿರು ಔಷಧಿ, ಬಾಲಾರಿಷ್ಠ,ಹೆದರಿಕೆ ಬೆಚ್ಚಿಕೆ, ಮುಂತಾದ ಖಾಯಿಲೆಗಳಿಗೆ ಮಂತ್ರ ಹಾಕಿ ವಾಸಿ ಮಾಡುವ ಸಿದ್ಧಿಯನ್ನೂ ಪಡೆದಿದ್ದರಿಂದ, ಆ ಹಳ್ಳಿಯ ಜನರೆಲ್ಲರೂ ಇವರ ಹತ್ತಿರ ಬಂದು ತಮ್ಮ ಖಾಯಿಲೆಗಳಿಗೆ ಮನೆ ಮದ್ದು ತೆಗೆದುಕೊಂಉ ಹೋಗುತ್ತಿದ್ದರು. ಆದರೆ ನಂಜಮ್ಮ ಅಜ್ಜಿ ಮಾತ್ರ ಯಾರಿಂದಲೂ ಒಂದು ಚಿಕ್ಕಾಸನ್ನು ತೆಗೆದುಕೊಳ್ಳದೇ , ಸೇವಾ ಭಾವದಿಂದ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. 
ಒಂದು ದಿನ  ಆ ಹಳ್ಳಿಯ ಒಬ್ಬ ಹೆಂಗಸು, ತನ್ನ ಎರಡು ವರ್ಷದ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಬಂದು, ನಂಜಮ್ಮ ಅಜ್ಜಿಯ ಮುಂದೆ ಗೊಳೊ ಅಂತ ಅಳುತ್ತಾ ಕುಳಿತಾಗ, ಅವಳನ್ನು ನೋಡಿ ಏನಾಯಿತೆಂದು ವಿಚಾರಿಸಿದಾಗ, ಅವಳ ಮಗುವಿಗೆ ಎರಡು ದಿನಗಳಿಂದ ಹೊಟ್ಟೆ ಉಬ್ಬರಿಸಿಕೊಂಡು ಅಳ್ಳುತ್ತಾ ಇದೆ ಎಂದು ಹೇಳಿಕೊಂಡಳು. 
ಆ ಕೂಡಲೇ ನಂಜಮ್ಮ ಅಜ್ಜಿ ತಮ್ಮ ಮಡಿ,ಮೈಲಿಗೆಯನ್ನು ಲೆಕ್ಕಿಸದೇ, ಆ ಮಗುವನ್ನು ತಮ್ಮ ತೊಡೆಯಲ್ಲಿ ಮಲಗಿಸಿಕೊಂಡು, 
ಮೈಯ್ಯೆಲ್ಲಾ ಮುಟ್ಟಿ ನೋಡಿ, ನಾಡಿ ಹಿಡಿದು, ಆ ಮಗುವಿಗೆ ಏನಾಗಿದೆ ಎಂದು ಖಚಿತ ಪಡಿಸಿಕೊಂಡರು. ನಂತರ ಅದನ್ನು ಅವರ ಅಮ್ಮನ ಮಡಿಲಿಗೆ ಕೊಟ್ಟು ,ಒಂದು ಸೂಜಿಯನ್ನು ಹಿಡಿದುಕೊಂಡು, ಹತ್ತು ನಿಮಿಷ ಮಂತ್ರ ಹಾಕಿ, ಮನೆಯಲ್ಲಿ ತಮ್ಮ ಕೈಯ್ಯಾರೆ ತಯಾರಿಸಿದ್ದ ಮನೆ ಮದ್ದನ್ನು ಕೊಟ್ಟು ಕಳುಹಿಸಿದರು. ನಂತರ ಮಗುವನ್ನು ಒಂದು ವಾರ ಹೀಗೇ ಕರೆದುಕೊಂಡು ಬರಲು ಹೇಳಿದರು. ಕಾಮಾಲೆ ರೋಗದಿಂದ ಬಳಲುತ್ತಿದ್ದ ಆ ಮಗುವಿಗೆ ತಮ್ಮ್ ಮಂತ್ರ ಮತ್ತು ಮನೆ ಮದ್ದುಗಳಿಂದ ಗುಣಮುಖವಾಗಿ ಮಾಡಿದರು. ಮೊದಲನೇ ದಿನ ಬಂದ ಆ ಮಗು, ಕಡೆಯ ದಿನ ಬರುವ ವೇಳೆಗೆ ಲವಲವಿಕೆಯಿಂದ ಆರೋಗ್ಯವಾಗಿತ್ತು. 
ಕಡೆಯ ದಿನ ಮಗುವಿನ ಅಮ್ಮ, ನಂಜಮ್ಮ ಅಜ್ಜಿಯ ಕಾಲಿಗೆ ಬಿದ್ದು , ತನ್ನ ಮನೆಯಲ್ಲಿ ಬೆಳೆದಿದ್ದ ಹಣ್ಣು ತರಕಾರಿಗಳನ್ನು ಕೊಟ್ಟು ಹೋಗಿದ್ದಳು. 
ಕೋಡಿಹಳ್ಳಿಯ ಎಷ್ಟೋ ಜನರ ಖಾಯಿಲೆಗಳಿಗೆ ತಮ್ಮ ಮನೆ ಮದ್ದುಗಳಿಂದ ’ಮಂತ್ರದ ಮುದುಕಿ’ ಎಂದು ಹೆಸರುವಾಸಿಯಾಗಿದ್ದರು. 

ವಿಜಯಭಾರತೀ.ಎ.ಎಸ್.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract