STORYMIRROR

Vijaya Bharathi.A.S.

Abstract Classics Children

3  

Vijaya Bharathi.A.S.

Abstract Classics Children

ಮಕ್ಕಳಾಟ

ಮಕ್ಕಳಾಟ

1 min
121

ಅಂದು ಸಂಜೆ ಮನದ ದುಗುಡವನ್ನು ಇಳಿಸಿಕೊಳ್ಳಲು ಹತ್ತಿರದ ಉದ್ಯಾನವನಕ್ಕೆ ಹೋಗಿ, ವಾಕಿಂಗ್ ಶುರು ಮಾಡಿದೆ. ಯಾಕೋ ಏನೋ ಒಂದೆರಡು ರೌಂಡ್ ಹಾಕುವಷ್ಟರಲ್ಲಿ ಸಾಕೆನಿಸಿ ಅಲ್ಲೇ ಕಲ್ಲು ಬೆಂಚಿನ ಮೇಲೆ ಕುಳಿತೆ. ಎದುರಿನಲ್ಲಿ ಪುಟ್ಟ ಪುಟ್ಟ ಮಕ್ಕಳು ಸಂತೋಷದಿಂದ ಆಟ ಆಡುತ್ತಾ ಇರುವುದನ್ನು ನೋಡುತ್ತಾ ಹಾಗೆ ಗಮನಿಸುತ್ತಾ ಹೋದೆ.

ಮುಗ್ಧ ಮನಸ್ಸಿನ ಮುದ್ದು ಮಕ್ಕಳು ನಿರ್ಯೋಚನೆಯಿಂದ ಪಟಪಟನೆ ಮೆಟ್ಟಲೇರಿ ಜಾರು ಗುಪ್ಪೆ,ಜೋಕಾಲಿ, ಚೆಂಡಾಟ,ತಿರುಗುಬಾಣ ಗಳ ಆಟಗಳನ್ನು ಆಡುತ್ತಾ ನಕ್ಕು ನಲಿಯುತ್ತಿದ್ದವು. ಆಗ ನನ್ನ ಮನಸ್ಸಿನಲ್ಲಿ ಅಸೂಯೆಯಾಯಿತು. 

ಅಬ್ಬಾ ನಾವು ಮಕ್ಕಳಂತೆ ಸಂತೋಷದಿಂದ ಆಟವಾಡಲು ಏಕೆ ಆಗುವುದಿಲ್ಲ. ಈ ಬಾಲ್ಯವೆಂಬುದು ಮನುಷ್ಯರಿಗೆ ದೇವರು ಕೊಟ್ಟಿರುವ ವರವೇ ಸರಿ, ಎಂದು ಏನೇನೋ ಯೋಚಿಸುತ್ತಾ ಕುಳಿತಿದ್ದ ನನ್ನ ಕಡೆಗೆ ಚೆಂಡೊಂದು ಬಂದು ಬಿದ್ದಾಗ ಅದನ್ನು

ಅರಸುತ್ತಾ ಒಂದು ಪುಟಾಣಿ ನನ್ನ ಮುಂದೆ ನಿಂತು, 

"ತಾತ ತಾತ ಚೆಂಡು ಬೇಕು" ಎಂದು ತನ್ನ ಪುಟ್ಟ ಕೈಗಳನ್ನು ಚಾಚಿದಾಗ, ನಾನು ಅದರ ಕೈಗೆ ಚೆಂಡನ್ನು ಎಸೆಯುತ್ತಾ "ಕ್ಯಾಚ್" ಎಂದೆ.ನಂತರ ಅದೂ ಸಹ 

"ಕ್ಯಾಚ್"ಅಂತ ಮತ್ತೆ ಚೆಂಡನ್ನು ನನ್ನತ್ತ ಎಸೆಯಿತು. 

ಹೀಗೆ ಬಹಳ ಹೊತ್ತು ಮಗುವಿನೊಂದಿಗೆ ಆಟವಾಡುತ್ತಾ ಆಟವಾಡುತ್ತಾ ನನ್ನ ಮನದ ದುಗುಡವೆಲ್ಲವೂ ಮಾಯವಾಗಿತ್ತು. ನಂತರ ಮಗುವಿನ ಅಮ್ಮ ಅದನ್ನು ಹುಡುಕಿಕೊಂಡು ಬಂದು ಕರೆದುಕೊಂಡು ಹೋದಾಗ, ನಾನು ಮನೆಯ ಕಡೆ ಹೊರಟೆ. ಮನೆಯಿಂದ ಪಾರ್ಕ್ ಗೆ ಬರುವಾಗ ಮನದ

ತುಂಬಾ ತುಂಬಿದ್ದ ದುಗುಡ ಕಳೆದು, ಮನಸ್ಸು ಹಗುರಾಗಿ ಹೋಗಿತ್ತು.ಆಟಕ್ಕೆ ಎಂತಹ ಶಕ್ತಿ ಇದೆ ಎಂದು ನನಗರಿಕೆಯಾಗಿತ್ತು.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract