Gireesh pm Giree

Abstract Classics Inspirational

4.2  

Gireesh pm Giree

Abstract Classics Inspirational

ಮಾತಾ ಪಿತಾ

ಮಾತಾ ಪಿತಾ

2 mins
310


ಕಣ್ಣುಗಳೆರಡು ದೇವರು ಕೊಟ್ಟನು ಆ ಕಣ್ಣುಗಳಂತೆ ಈ ಜಗದಲ್ಲಿ ಮತ್ಯಾರು ಇದ್ದಾರೆ ಎಂದರೆ ಅದು ತಂದೆ-ತಾಯಿ ಮಾತ್ರ. ತನ್ನೆಲ್ಲಾ ಕಷ್ಟಗಳು ಎಲ್ಲಿ ತನ್ನ ಮಗುವಿನ ಭವಿಷ್ಯಕ್ಕೆ ಮುಳುವಾಗುತ್ತದೆ ಎಂಬ ಕಾರಣಕ್ಕೆ ತೋರ್ಪಡಿಸದೆ . ಇಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಕೆಲಸಕ್ಕೆ ಹೋಗದಿದ್ದರೆ ಎಲ್ಲಿ ಮಕ್ಕಳು ಹಸಿವಿನಿಂದ ಇರುತ್ತಾರೆ ಎಂಬ ಚಿಂತೆ . ತನ್ನ ಹೊಟ್ಟೆ ತಾಳ ಹಾಕಿದರೂ ಅದನ್ನು ಲೆಕ್ಕಿಸದೆ ಮಕ್ಕಳ ಹಸಿವನ್ನು ತಣಿಸುವ ಕರುಣಾಮಯಿಗಳು.

ಅಮ್ಮನ ಪ್ರೀತಿಯೆಂಬ ಭಾಷೆಯು ಅವಳ ಮುಗ್ಧತೆ ಬೇಗನೆ ಅರಿವಾಗುತ್ತದೆ. ಆದರೆ ಅಪ್ಪನ ಪ್ರೀತಿಯು ನಮ್ಮಗೆ ಹಾಗೆ ಪಕ್ಕನೆ ಗೋಚರವಾಗುವುದು ಕಷ್ಟ. ಹಾಗಂತ ಅವರಿಗೇನು ಸ್ನೇಹವಿಲ್ಲವೆಂದು ಅಲ್ಲ ಅವರೊಳಗೂ ಗೆಳೆತನ ಅಕ್ಕರೆ ಇರುವುದು ನಿಜ.

ಬಾಲ್ಯದ ದಿನಗಳನ್ನು ಒಮ್ಮೆ ಮೆಲುಕು ಹಾಕಿದಾಗ ನೆನಪುಗಳ ತಂಗಾಳಿಯು ಮನಮುದಗೊಳಿಸುವಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಅಪ್ಪ-ಅಮ್ಮನ ಪ್ರೀತಿಯು ಅವರ ಮಾತುಗಳು ನೆನೆದಷ್ಟು ಆ ಕ್ಷಣವ ಬಗೆದಷ್ಟು ಮುಖದ ಮೇಲೆ ಸಂತಸ ಮೂಡುತ್ತದೆ. ನನಗೆ ಅಪ್ಪನೊಂದಿಗೆ ಕಳೆದ ಮಧುರ ಕ್ಷಣವು ಇಂದಿಗೂ ಹೃದಯಾಲಯದಲ್ಲಿ ಹಸಿರಾಗಿದೆ.

ಕ್ರಿಕೆಟ್ ಆಡಲೆಂದು ಹೊಸ ಬ್ಯಾಟ್ ತಂದುಕೊಟ್ಟಿದ್ದು, ಅಪ್ಪನ ಜೊತೆಗೂಡಿ ಲೂಡೋ ಕ್ಯಾರಂ ಬ್ಯಾಟ್ಮಿಟನ್ ಆಟ ಆಡಿದ್ದು, ಹಾಗೆಯೇ ಒಮ್ಮೆ ಬ್ಯಾಟ್ಮಿಟನ್ ಆಡುತ್ತಾ ಆಡುತ್ತಾ ಸುಸ್ತಾಗಿ ನಾನು ಬಿದ್ದು ಅಪ್ಪನನ್ನು ಜೋಕಾಲಿಯಂತೆ ನನ್ನ ಕೈಯಲ್ಲಿ ಉಪಚರಿಸಿದ್ದು, ಶಾಲೆಯ ಪ್ರವೇಶೋತ್ಸವದ ಮೊದಲು ಹೊಸ ಸಮವಸ್ತ್ರ, ಪೆನ್, ಪೆನ್ಸಿಲ್, ಪುಸ್ತಕ , ಬ್ಯಾಗು ನನಗೆ ಬೇಕಾಗಿರುವ ವಸ್ತುಗಳನ್ನು ಎಷ್ಟೇ ಕಷ್ಟವಾದರೂ ಅದನ್ನು ಹಿಂದೆ ಮುಂದೆ ನೋಡದೆ ಖರೀದಿಸುತ್ತಿದ್ದರು. ಆಗ ಅವರಾಡುತ್ತಿದ್ದ ಮಾತು ಇಂದಿಗೂ ನನ್ನ ಕಿವಿಯ ಅಂಚಿನಲ್ಲಿದೆ ."ಮಗ ನಿನಗಾಗಿ ನಾನು ಇಷ್ಟೆಲ್ಲ ಮಾಡುವೆ ಆದರೆ ನೀನು ಚೆನ್ನಾಗಿ ಓದದೆ ಬೀದಿ ಬಸವ ಆಗದೆ ಭೂಮಿಗೆ ಭಾರವಾಗದೆ ಬಾಳು" ಎಂದು ಹೇಳಿದ್ದುಂಟು. ಅದು ವಾಸ್ತವವಾಗಿ ಈ ಸತ್ಯ.

ಇನ್ನು ಭಾನುವಾರ ಬಂತೆಂದರೆ ಸಾಕು ಹತ್ತಿರದ ಪಟ್ಟಣಕ್ಕೆ ಹೋಗಿ ಐಸ್ ಕ್ರೀಂ ಸವಿಯುವುದೆಂದರೆ ನನಗಂತೂ ಬಲು ಇಷ್ಟ . ಇನ್ನು ಹಬ್ಬದ ಸಮಯದಲ್ಲಿ ಅಪ್ಪ ತೆಗೆದು ಕೊಡುತ್ತಿದ್ದ ಹೊಸ ಉಡುಪಿನ ಬಣ್ಣವನ್ನು ನೋಡಿ ಕಣ್ಣುಗಳು ಅರಳುತ್ತಿತ್ತು. ಅದನ್ನು ತೊಟ್ಟು ಅಪ್ಪನೆದುರು ಅತ್ತಿಂದಿತ್ತ ನಡೆದರೆ ಸಾಕು ರಂಗುರಂಗಿನ ವೇದಿಕೆಯಲ್ಲಿ ನೃತ್ಯ ಮಾಡಿದಷ್ಟು ಖುಷಿಯಾಗುತ್ತಿತ್ತು.

 ಅಟ್ಟದಲ್ಲಿರುವ ಹಳೆಯ ಸೈಕಲ್ಲನ್ನು ನೋಡುವಾಗ ನನ್ನ ಹತ್ತನೇ ವಯಸ್ಸು ಜ್ಞಾಪಕಕ್ಕೆ ಬರುತ್ತದೆ. ಸೈಕಲ್ನಲ್ಲಿ ಮಾಡಿದ ಸರ್ಕಸ್ಸು ಅದು ಉಣಬಡಿಸಿದ ಮಸ್ತ್ ಮಸ್ತಿ ನ ದಿನಗಳಿಗೆ ನಾನು ಪರವಶನಾಗಿದ್ದೆ.

ನನ್ನಿಂದ ಅಪ್ಪ ಎಷ್ಟು ಬಾರಿ ಬೇಸರಗೊಂಡಿದ್ದಾರೆ ಸಂತಸಗೊಂಡಿದ್ದಾರೆ . ನನ್ನ ಪ್ರತಿಯೊಂದು ಯಶಸ್ವಿಯಲ್ಲಿ ನನಗಿಂತ ಖುಷಿ ಆ ಜೀವ ಪಡುತ್ತಿತ್ತು. ಖುಷಿ ನೋಡಿ ನನ್ನ ಖುಷಿಗೆ ಪಾರವೇ ಇರಲಿಲ್ಲ . ಅದುವೇ ಅಲ್ಲವೇ ನಿಜವಾದ ಖುಷಿ! . ಇಂದಿಗೂ ಎಂದೂ ಮಾಸದ ಖುಷಿ ಯಾವುದಾದರೂ ಇದ್ದರೆ ಕೇಳಿದ್ರೆ ಅದು ನಾನು ಪಿಯುಸಿಯಲ್ಲಿ ಒಳ್ಳೆ ಅಂಕದೊಂದಿಗೆ ಫಸ್ಟ್ ಕ್ಲಾಸ್ನೊಂದಿಗೆ ಪಾಸಾದ ವಿಚಾರ ಕೇಳಿ ಅಂದು ಅಪ್ಪನ ಮೊಗದಲ್ಲಿ ಕಂಡ ಸಂತಸವು ಚಿಕ್ಕ ಮಗುವು ಟೈಮ್ ಸಿಕ್ಕಾಗ ಎಷ್ಟೊಂದು ಖುಷಿ ಪಡುತ್ತಿತ್ತೋ ಹಾಗಿತ್ತು. ಆದಿನ ನನಗಂತೂ ಜೀವನದಲ್ಲಿ ಮರೆಯಲಾಗದ ಸುಂದರ ಸುಂದರ ಕ್ಷಣ.

ಈ ಜನ್ಮ ಕೊಟ್ಟ ನನಗೆ ನಿನಗಾಗಿ ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಆಸೆ ನನಗೆ. ನಿನ್ನ ಪ್ರೀತಿಯು ನನ್ನೊಳಗೆ ಸದಾ ಉತ್ಸಾಹ ತುಂಬುತ್ತದೆ ಅಪ್ಪ. ಐ ಲವ್ ಯು ಅಪ್ಪ.


Rate this content
Log in

Similar kannada story from Abstract