STORYMIRROR

Harsha Shetty

Drama Tragedy Classics

4  

Harsha Shetty

Drama Tragedy Classics

ಕೃಷ್ಣ ಕುಟೀರ ಭಾಗ -9 ವಿಶ್ವನಾಥ್ ಅವರ ಅಂತ್ಯ

ಕೃಷ್ಣ ಕುಟೀರ ಭಾಗ -9 ವಿಶ್ವನಾಥ್ ಅವರ ಅಂತ್ಯ

2 mins
236


 ವಿಜಯೇಂದ್ರ : ಮನೆಯಲ್ಲಿ ವಿಶ್ವನಾಥ್ ಅವರು ಹಾಗು ಅವರ ಸೊಸೆ ಮಾತ್ರ ಇರುವ ಸಮಯದಲ್ಲಿ ನೀನು ನಿನಗೆ ಜೋರು ಹೊಟ್ಟೆ ನೋವು ಬರುವಂತೆ ನಟಿಸ್ತಿಯಾ

 ಹಾಗೂ ಆ ನೋವಿಗೆ ಮದ್ದು ನಾಟಿ ವೈದ್ಯರತ್ರ ಮಾತ್ರವಿದೆ ಎಂದು ಹೇಳಿ ಹೇಗಾದರೂ ಮಾಡಿ ಇಲ್ಲಿದ್ದ 20 ಕಿಲೋ ಮೀಟರ್ ಇರುವ ಆನೆಗುಂಡಿ ಎಂಬ ಊರಿಗೆ ಕರೆದುಕೊಂಡು ಬಾ ಮಿಕ್ಕಿದನ್ನು ನನಗೆ ಬಿಡು

 ನಿಂಗಿ : ಅಂತ ಸಮಯವೆಂದರೆ ಮುಂದಿನ ಮಂಗಳವಾರ ಜಗನ್ನಾಥನು ಅಂದು ಮಂಗಳಾರವಿರುವುದರಿಂದ ಕೃಷ್ಣನ ಭಜನೆ ಮಾಡಲು ಮಂದಿರಕ್ಕೆ ಹೋಗುತ್ತಾನೆ ಶೇಷ court ಹೋಗುತ್ತಾನೆ ಮತ್ತೆ ನನ್ನ ಗಂಡನನ್ನು ಏನೋ ಒಂದು ನೆಪ ಕೊಟ್ಟು ಹೊರಗಡೆ ಕಳಿಸ್ತೀನಿ ಸುರೇಂದ್ರ ಆಟಕ್ಕಿದ್ದರು ಲೆಕ್ಕಕ್ಕಿಲ್ಲ ಅಂತ ಸಮಯದಲ್ಲಿ ಅಪ್ಪನೇ ನಂಜೊತೆ ಆಸ್ಪತ್ರೆಗೆ ಬರಬೇಕು 

 ವಿಜಯೇಂದ್ರ :then ಬರುವ ಮಂಗಳವಾರ ವಿಶ್ವನಾಥ್ ಅವರ ಅಂತಿಮ ಪಯಣ rest in peace Mr Vishwanath

 ಅಂದು ಮಂಗಳವಾರ ಎಂದಿನಂತೆ ಶೇಷನು ಮುಂಜಾನೆ ಬೇಗ ಕೋಟಿಗೆ ಹೊರಟನು ಅದಾದ್ಮೇಲೆ ಬೆಳಿಗ್ಗೆ 9:00 ಸಮಯ ಜಗನ್ನಾಥನು ದೇವಸ್ಥಾನಕ್ಕೆ ಹೊರಟ ಅದೇ ಸಮಯ ನೋಡುತ್ತಾ ಸುಕೇಶನು ತನಗೆ ಪಕ್ಕದ ಊರಿನಲ್ಲಿ ಏನು ಕೆಲಸವಿದೆ ಎಂದುಕೊಂಡು ಹೊರಟು ಹೋದನು

 ಇದೇ ಉಚಿತವಾದ ಸಮಯ ಎಂದುಕೊಂಡು ನಿಂಗಿ ಜೋರು ಜೋರಾಗಿ ಕಿರುಚಲಪ್ರಾರಾಂಬಿಸಿದಳು 

 ಅದನ್ನು ಕೇಳಿದ ವಿಭಾ ಓಡೋಡಿ ಬಂದಳು

 ವಿಭಾ : ಅಕ್ಕ ಏನಾಯ್ತು

 ನಿಂಗಿ : ಅಯ್ಯಯ್ಯೋ ಅಯ್ಯಯ್ಯೋ ಹೊಟ್ಟೆ ನೋವು ತುಂಬಾ ಹೊಟ್ಟೆ ನೋವು ತಡೆಯಲು ಆಗುತ್ತಿಲ್ಲ 

 ವಿಭಾ : ಮಾವ ಎಂದು ಗಟ್ಟಿಯಾಗಿ ಕೂಗಿದಳು 

 ಅವಳ ಕೂಗನ್ನು ಕೇಳಿ ವಿಶ್ವನಾಥನು ಓಡೋಡಿ ಬಂದನು

 ವಿಶ್ವನಾಥ ವಿಭಾ ಕುರಿತು ಏನಾಯ್ತು ಮಗಳೇ ಎಂದು ಕೇಳಿದ 

 ವಿಭಾ : ನೋಡಿ ಮಾವ ಅಕ್ಕನಿಗೆ ತುಂಬಾ ಹೊಟ್ಟೆ ನೋವಂತೆ 

 ನಿಂಗಿ : ಅಪ್ಪ ಸಾಯುವಷ್ಟು ನೋವಾಗ್ತಿದೆ ಅಪ್ಪ 

 ವಿಶ್ವನಾಥ : ಹಾಗಾದ್ರೆ ಸತ್ತು ಹೋಗು ನಮ್ಮ ಎಲ್ಲಾ ಕಷ್ಟಕು ಪರಿಹಾರವಾಗುತ್ತದೆ 

 ವಿಭ : ಏನು ಮಾವ ನೀವು ಈ ಸಮಯದಲ್ಲೂ ಸುರೇಂದ್ರ ಎಂದು ಗಟ್ಟಿಯಾಗಿ ಕೂಗಿದಳು ಅವಾಗ ಸುರೇಂದ್ರಾನು ಬಂದು ಏನಮ್ಮ ಎಂದು ಕೇಳಿದ 

 ವಿಭ : ತಕ್ಷಣ ಡಾಕ್ಟರ್ ಡಿಸೋಜಕ್ಕೆ ಕಾಲ್ ಮಾಡಿ ಬರಲು ಹೇಳು 

 ನಿಂಗಿ : ಈ ಹೊಟ್ಟೆ ನೋವಿಗೆ ಇಂಗ್ಲಿಷ್ ಮೆಡಿಸಿನ್ ಆಗಲ್ಲ ಅತ್ತೆ ಇದಕ್ಕೆ ನಾಟಿ ವೈದ್ಯರ ಬೇಕು 

 ವಿಶ್ವನಾಥ : ಈಗ ನಾಟಿ ವೈದ್ಯರನ್ನು ಎಲ್ಲಿಂದ ಕರ್ಕೊಂಡು ಬರಲಿ ಸುಮ್ನೆ ಡಾಕ್ಟರ್ ಡಿಸೋಜಾ ಹತ್ತಿರ 

 Treatment ತಗೋ

 ನಿಂಗಿ : ಈ ಹೊಟ್ಟೆ ನೋವು ನನಗೆ 5 ವರ್ಷದಿಂದೆ ಇದೆ

 ಮೊದಲು ಕೂಡ ತುಂಬಾ ಇಂಗ್ಲೀಷ್ ಮೆಡಿಸನ್ ಮಾಡಿದೀನಿ ಆದರೆ ಏನು ಪ್ರಯೋಜನವಾಗಲಿಲ್ಲ ಇದು ನಾಟಿ ವೈದ್ಯರಿಂದಲೇ ಗುಣವಾಗುತ್ತದೆ

 ವಿಭಾ : ಹಾಗಾದ್ರೆ ನಾಟಿ ವೈದ್ಯರ ಬಳಿ ಕರ್ಕೊಂಡ್ ಹೋಗಿ ಮಾವ

 ವಿಶ್ವನಾಥ : ಬಿಡು ಬಿಡು ಮಗಳೇ ಸ್ವಲ್ಪ ಹೊತ್ತಿನ ನಂತರ ಸರಿ ಹೋಗುತ್ತದೆ

 ವಿಭ : ನೀವು ಕರ್ಕೊಂಡು ಹೋಗ್ತೀರಾ ಅಥವಾ ನಾನೇ ಹೋಗ್ಲಾ 

 ವಿಶ್ವನಾಥ : ಬೇಡ ಬಿಡು ನಾನೇ ಹೋಗ್ತೀನಿ 

 ವಿಭ : ಮನೆಯಲ್ಲಿದ್ದ ವಾಹನಗಳನ್ನು ಗಂಡಸರು ತಗೊಂಡು ಹೋಗಿದ್ದಾರೆ ತಿಮ್ಮ ಹೋಗಿ ಒಂದು ಆಟೋ ಅಥವಾ ಗಾಡಿ ತಗೊಂಡು ಬಾ 

 ತಿಮ್ಮ ಹೊರಗಡೆ ಹೋದಾಗ ತಕ್ಷಣ ಅವನಿಗೊಂದು ಆಟೋ ಸಿಕ್ತು ಆಟೋದಲ್ಲಿ ವಿಶ್ವನಾಥ್ ಅವರು ನಿಂಗಿಯನ್ನು ಕರೆದುಕೊಂಡು ಆನೆಗುಂಡಿಯಲ್ಲಿರುವ ನಾಟಿ ವೈದ್ಯರ ಬಳಿ ಬಂದರು

 ವಿಜಯೇಂದ್ರ ಜಯೇಂದ್ರನನ್ನು ಕುರಿತು ಆನೆಗುಂಡಿಯಲ್ಲಿರುವ ನಾಟಿ ವೈದ್ಯನಿಗೆ 50,000 ಕೊಟ್ಟು ನಿಂಗಮ್ಮ ತುಂಬಾ ವರ್ಷದಿಂದ ಗೊತ್ತಿರುವ ಹಾಗೆ ನಟಿಸಲು ಹೇಳು ಅದು ನಿರ್ಜನವಾದ ಪ್ರದೇಶ ಆದರೆ ಅಲ್ಲಿ ಒಂದು ಚಿಕ್ಕ ಆಟೋ ಸ್ಟ್ಯಾಂಡ್ ಮಾತ್ರ ಇರುತ್ತದೆ ಯಾಕಂದರೆ ಸ್ವಲ್ಪ ದೂರದಲ್ಲಿ ಒಂದು ಸ್ಕೂಲ್ ಇದೆ ಯಾರಾದರೂ ಆಟೋ ಹಿಡಿಬೇಕಾದರೆ ಅರ್ಧ ಕಿಲೋಮೀಟರ್ ನಡೆದುಕೊಂಡು ಬಂದು ಆಟೋ ಹಿಡಬೇಕು 


ಆದರಿಂದ ಸ್ಕೂಲಿನವರು ಯಾರು ಈ ಘಟನೆಯನ್ನು ನೋಡಲು ಸಾಧ್ಯವಿಲ್ಲ ಅದು ಬಿಟ್ಟರೆ ಆಟೋ ಸ್ಟ್ಯಾಂಡಲ್ಲಿ ನಾವು ಬುಕ್ ಮಾಡಿ ಆಟೋ ಡ್ರೈವರ್ ಬಿಟ್ಟು ಬೇರೆ ಯಾರು ಇರಬಾರದು


 ವಿಶ್ವನಾಥ ಮತ್ತು ನಿಂಗಿ ಇಬ್ಬರು ನಾಟಿ ವೈದ್ಯರನ್ನು ಭೇಟಿಯಾಗಿ ಮದ್ದು ತಗೊಂಡು ಬರುವಾಗ ವಿಶ್ವನಾಥನಿಗೆ ರೋಡಿನಾಚೆ ಒಂದು ಆಟೋ ಕಂಡು ಬಂತು ಆಟೋ ಅಂತ ಎಷ್ಟು ಕರೆದರು ಆತ ಉತ್ತರಿಸಿಲ್ಲ ವಿಶ್ವನಾಥನು ನಿಂಗೆ ಹತ್ರ ಏನು ಹೇಳದೆ ಆಟೋ ಕರೆದೊಯ್ಯಲು ರೋಡನ್ನು ದಾಟಲು ಪ್ರಾರಂಭಿಸಿದನು ಆದರೆ ನಿಂಗಿ ಅಲ್ಲೇ ನಿಂತು ಬಿಟ್ಟಳು ತಕ್ಷಣವೇ ಒಂದು ಟ್ರಕ್ ಬಂದು ವಿಶ್ವನಾಥನನ್ನು ಉಡಾಯಿಸಿಕೊಂಡು ಹೋಯಿತು ಕ್ಷಣಮಾತ್ರದಲ್ಲಿ ವಿಶ್ವನಾಥನ ಸಾವನಪ್ಪಿದನು

 

ಕಥೆ ಮುಂದುವರೆಯುವುದು 


இந்த உள்ளடக்கத்தை மதிப்பிடவும்
உள்நுழை

Similar kannada story from Drama