ಕಪ್ಪು ಕಸ್ತೂರಿ
ಕಪ್ಪು ಕಸ್ತೂರಿ
ಆ ತಾಯಿಗೆ ತನ್ನ ಮೊದಲನೇ ಮಗಳು ಕೃಷ್ಣಾಳದೇ ಚಿಂತೆಯಾಗಿತ್ತು. ಅವಳ ನೀಲಮೇಘದ ಬಣ್ಣದಿಂದ ಅವಳನ್ನು ಯಾರೂ ಒಪ್ಪುತ್ತಿರಲಿಲ್ಲ. ಆದರೆ ತುಂಬಾ ಬೆಳಗ್ಗಿದ್ದ ಎರಡನೇ ಮಗಳು ಕೃಪಾಳನ್ನು ವರನ ಕಡೆಯವರು ತಾವಾಗೇ ಅವಳನ್ನು ಮದುವೆ ಮಾಡಿ ಕೊಡುವುದಕ್ಕೆ ಕೇಳುತ್ತಿದ್ದರು. ಆ ತಾಯಿಗೆ ಕೃಷ್ಣಾಳ ಮದುವೆ ಮಾಡದೇ ಕೃಪಾಳ ಮದುವೆ ಮಾಡುವುದು ಸುತರಾಂ ಇಷ್ಟವಿರಲಿಲ್ಲ.
ಆದರೆ ಕೃಷ್ಣಾ ಳೇ ತಾನಾಗಿಯೇ ತನ್ನ ತಂಗಿಯ ಮದುವೆಗೆ ಒಪ್ಪಿಗೆ ಕೊಟ್ಟಿದ್ದರಿಂದ ಕೃಪಾಳ ಮದುವೆ ನಡೆದು ಹೋಯಿತು. ತನ್ನ ಬಣ್ಣ ರೂಪದಿಂದ ಬೀಗುತ್ತಿದ್ದ ಕೃಪಾ ಅಕ್ಕನ ಎದುರು ಗಂಡನ ಕೈ ಹಿಡಿದು ಸಂತೋಷದಿಂದ ಗಂಡನ ಮನೆಗೆ ಹೊರಟು ಹೋದಳು. ಕಪ್ಪು ಬಣ್ಣದ ಕೃಷ್ಣಾ , ಒಳ್ಳೆಯ ಸದ್ಗುಣಿ , ಕೃಷ್ಣನ ಪರಮ ಭಕ್ತೆ.ತನಗೆ ಇನ್ನೆಂದಿಗೂ ಮದುವೆಯಾಗುವುದಿಲ್ಲ ವೆಂದು ತಿಳಿದ ಕೃಷ್ಣಾ, ತನ್ನ ಆರಾಧ್ಯ ದೈವ ಕೃಷ್ಣ ನ ಬೃಂದಾವನಕ್ಕೆ ಹೋಗಿ, ಕೃಷ್ಣನ ಭಕ್ತಪಂಥಕ್ಕೆ ಸೇರಿಕೊಂಡು, ಕೃಷ್ಣ ಭಕ್ತಿಯಲ್ಲಿ ತಲ್ಲೀನಳಾದಳು.
ಇಡೀ ಲೋಕದ ಜನರು ತನ್ನನ್ನು ತಿರಸ್ಕರಿಸಿದರೂ, ನಿನ್ನಂತೆಯೇ ಇರುವ ಕೃಷ್ಣ ನನ್ನನ್ನು ಎಂದೂ ಕೈ ಬಿಡುವುದಿಲ್ಲ ಎಂದು ಬಲವಾಗಿ ನಂಬಿದ್ದ ಅವಳು ಮುಂದೆ ಭಾಗವತೋತ್ತಮ ಳಾಗಿ ಕೃಷ್ಣ ಭಕ್ತಿ ಪಂಥದ ಅನೇಕರಿಗೆ ಮಾರ್ಗದರ್ಶನ ಮಾಡುತ್ತ ಗುರುಮಾತೆ ಮಾಡಿದಳು. ಮನುಷ್ಯನ ಹೊರಬಣ್ಣಕ್ಕಿಂತ ಅವನ ಬೆಣ್ಣೆಯಂತ ಹೃದಯವನ್ನು ಬೆಣ್ಣೆ ಕೃಷ್ಣ ಎಂದಿಗೂ ಮೆಚ್ಚುತ್ತಾನೆ.
ಕಪ್ಪು ಕಸ್ತೂರಿಯಲ್ಲವೆ?
