Bellala Gopinath Rao

Thriller

2.6  

Bellala Gopinath Rao

Thriller

ಕೊಂಡಿಗಳು

ಕೊಂಡಿಗಳು

6 mins
299



ಕೊಂಡಿ ೧


ಆಗಲೇ ತಡವಾಗಿತ್ತು , ಇಂದು ಮೀಟಿಂಗ್ ಬೇರೆ ಇದೆ. ಅತ್ಯಂತ ಜರೂರಿನದ್ದು. ಬೆಳಗಿನ ತಿಂಡಿಯನ್ನು ಗಡಿಬಿಡಿಯಲ್ಲೇ ಪೂರೈಸಿ ಹೊರಬಂದ.

"ರೀ ಕರ್ಚೀಪು, ಕನ್ನಡಕ , ಪೆನ್ನು ಪಾಸು ಎಲ್ಲ ತಕೊಂಡ್ರಾ" ಅವಳು ಕೂಗಿ ಹೇಳಿದಳು.

"ಹಾಗೆಲ್ಲ ಕೂಗಿ ಹೇಳಬೇಡವೇ,ಯಾಕೆ ಎಲ್ಲ ನೀನೇ ಮಾಡಿಕೊಡೋದು ಅಂತ ಬೆರೆಯವರು ತಪ್ಪು ತಿಳ್ಕೊಂಡಾರು" ಎಂದನಾತ.

"ಅದೊಂದು ಬೇರೆ ಮತ್ತೇನು ಎಲ್ಲಾ ನೀವೇ ಮಾಡಿಕೊಳ್ಳುತ್ತಿದ್ದೀರಾ?

"ಮತ್ತೆ.... ನೀನು ಏನು ಮಾಡೋದು.... ಎಲ್ಲಾ ನಾನೇ ಅಲ್ಲವೇ ಮಾಡಿಕೊಳ್ಳೋದು.....?

"ಹೌದಾ? ಇರಿ ಬರ್ತೀನಿ ಅಲ್ಲಿ.... !!

ಹೊರ ಬಂದು ನೋಡಿ ನಕ್ಕು ಪಿಸುನುಡಿದಳು " ರೀ ಜಿಪ್ ಹಾಕಿಕೊಳ್ಳಿ"

"ಹಾಕಿದ್ದೆನಲ್ಲ ನೋಡು"

"ಬ್ಯಾಗಿನದ್ದಲ್ಲ, ಎಲ್ಲಾ ನೀವೇ ಮಾಡ್ಕೋತೀರಾ ಬಂದು ಹಾಕಲಾ........?.... ನಿಮ್ಮ ಪ್ಯಾಂಟ್ ನದ್ದು"

ನಗುತ್ತಿದ್ದ ಅವಳನ್ನು ಆರಾಧನಾ ದೃಷ್ಟಿಯಿಂದ ನೋಡುತ್ತಾನಿಂತು ಬಿಟ್ಟ.

ಸಾಕು ಈಗ ತಡವಾಗ್ತಿಲ್ಲವಾ? ಮೀಟಿಂಗ್ ಗೆ

ಹೌದಲ್ವಾ? ಇವತ್ತು ಹೋಗದಿದ್ದರೆ ನನ್ನ ಕೊಂದೇ ಬಿಡುವರು ನನ್ನ ಬಾಸ್"

"ಯಾಕೆ ಹಾಗೆಲ್ಲಾ ಸಾವಿನ ಸುದ್ದಿ ಹೇಳ್ತೀರಾ? ಬಿಡ್ತು ಅನ್ನಿ" ಎಂದಳವಳು.

ಹೆಚ್ಚು ಕಡಿಮೆ ಓಡಿಯೇ ಬಿಟ್ಟಿದ್ದ ಕೆಳಗೆ.

ಆ ಒಂದು ಕ್ಷಣ ಆತ ತಡಮಾಡದಿದ್ದರೆ ಆಕೆ ಕರೆದದ್ದು ಆತನಿಗೆ ಕೇಳುತ್ತಿರಲಿಲ್ಲ,

ಸಂಜೆ ಬೇಗ ಬರ್ತೀರಲ್ವಾ, ?

ಯಾಕೆ ಏನು ವಿಶೇಷ?

ಬಂದ ಮೇಲೇ ಹೇಳುತ್ತೇನೆ

ಹಿಂಟ್ ಕೊಡು

ಇವತ್ತು ಯಾವ ತಾರೀಖು?

ಹದಿಮೂರು

ಏನಾಗಿತ್ತು ಇವತ್ತು

ಯೋಚಿಸಿ ನೋಡಿ

ತಡವಾಯ್ತು ಪುನಃ, ಬಾಸ್ ಬೈಯ್ಯುತ್ತಾರೆ, ಅರ್ಜೆಂಟ್ ಮೀಟೀಂಗ್ ಬೇರೆ

ಆಗಲೇ ಕರೆವಾಣಿ ............."ಎಲ್ಲಿದ್ದೀರಾ?" ಬಾಸ್ !!

ಹೊರಟೆ ಬಂದೆ ಸರ್ ಜಸ್ಟ್ ಅರ್ಧ ಗಂಟೆಯಲ್ಲಿ ಅಲ್ಲಿರುತ್ತೇನೆ.



ಕೊಂಡಿ ೨:


ರೀ ಬೇಗ ಬರ್ತೀರಲ್ಲಾ ಇವತ್ತು..?

ಬರ್ತೀನಿ ಕಣೇ , ಯಾಕೆ ಯಾರಾದ್ರೂ ಬರ್ತಾ ಇದ್ದಾರಾ... ಓಹ್ ನೆನಪಾಯ್ತು.ಇವತ್ತು ನೀತಿ ಮತ್ತು ಅನೇಕ ಬರ್ತಾರೆ ಅಲ್ವಾ? ಏನಾದ್ರೂ ತರಬೇಕಾ?

ಬೇಡ ನೀವೇ ಬೇಗ ಬಂದ್ರೆ ಸಾಕು ಬಿಡಿ.

ಏನಾದ್ರೂ ವಿಶೇಷ ಇದ್ಯಾ?

ಗೊತ್ತಿಲ್ಲ ಕಣ್ರೀ..ಬರಲಾ ಅಂತ ಕೇಳಿದರು ಹ್ಞೂ ಅಂದೆ.

ಆ ಸಂಜೆ....

ಹಾಯ್ ಅನೇಕ್ ಹೇಗಿದ್ದೀರಾ..?

ನೋಡಿ...ಹೀಗೆ

ಮತ್ತೇನು ವಿಶೇಷ..?

ಇತ್ತೀಚೆಗೆ ಕಂಪೆನಿ ನನ್ನ ಮೇಲೆ ಜಾಸ್ತಿಯೇ ಮೆಹರ್ಬಾನ್ ಆಗಿಬಿಟ್ಟಿದೆ, ಈಗ ನಾನು ಕಂಪೆನಿಯ ಡೈರೆಕ್ಟರ್ ಗಳಲ್ಲೊಬ್ಬ. ಸ್ಯಾಲರೀನೂ ಡಬಲ್

ಗ್ರೇಟ್ ನ್ಯೂಸ್.. ಇದಕ್ಕೊಂದು ದೊಡ್ಡ ಪಾರ್ಟೀನೇ ಆಗಬೇಕು,

ಶ್ಯೂರ್.....ಶ್ಯೂರ್..

ಜಾಸ್ತಿ ರೆಸ್ಪಾನ್ಸಿಬಿಲೀಟ್ಸೂ ಇರುತ್ವೆ ಸ್ವಲ್ಪ ಜಾಗೃತೆಯಲ್ಲಿರಬೇಕು ನೀವು ನೋಡಿ


ಎಲ್ಲಿ ರೀತಿ....?

ಒಳಗೆ ಹೋಗಿರಬೇಕು..

ಹೌದು ಹೆಂಗಸರ ಡಿಪಾರ್ಟ್ಮೆಂಟ್ ... ಅಲ್ಲಿಯೇ ಅಲ್ಲವೇ.

ಇಲ್ಲ ಕೃಷ್ಣ..... ಅವಳು ಎಲ್ಲರ ಹಾಗಲ್ಲ....!?!

ಯಾಕೆ ಏನಾಯ್ತು..?

"ಹೊರಗಡೆ ಕೆಲಸ ಮಾಡೋದು ಬೇಡ ಅಂದದಕ್ಕೆ ನಿದ್ರೆ ಮಾತ್ರೆ ತಕೊಂಡು ಬಿಟ್ಟಿದ್ದಳು,

ಒಂದು ದಿನವಿಡೀ ಅಸ್ಪತ್ರೆಯಲ್ಲಿ.... ನನಗೆ ಇದೆಲ್ಲಾ ಸರಿ ಬರಲ್ಲ..... ಆದ್ರೂ ಒಪ್ಪದೇ ಇನ್ನೇನು ಮಾಡಲಿ.... ಒಂದೇ ಒಳ್ಳೆಯ ವಿಷಯ ಎಂದರೆ ನನ್ನ ಕಂಪೆನಿಯ ನಂಬರ್ ವನ್ ಡೈರೆಕ್ಟರ್ ಕಸಿನ್ ಕಂಪೆನಿಯಲ್ಲಿ ಸೆಕ್ರೆಟರಿಯಾಗಿದ್ದಾಳೆ.

ಬಿಡಿ ಈಗ ಕಾಲ ಬದಲಾಗಿದೆ .... ರೀತಿ ಸ್ವಲ್ಪ ಜಾಸ್ತೀನೇ ಸೆನ್ಸಿಟಿವ್ ಅಂತ ಕಾಣ್ಸತ್ತೆ, ಅವಳಿಗೂ ಮನೆಯಲ್ಲಿ ಸಮಯ ಹೋಗ ಬೇಕಲ್ವಾ..ನೀವೂ ಸ್ವಲ್ಪ ಬದಲಾಗಿ.

ಹಾಗೇನಿಲ್ಲ.... ನಿಮ್ಮ ನಿಶಾ ಹೇಗಿದ್ದಾರೆ ಮತ್ತೆ..? ಅವರೂ ಇಡೀ ದಿನ ಮನೆಯಲ್ಲೇ ಇರ್ತಾರಲ್ಲ.

ಮತ್ತೆ ನಿಮ್ಮ ಮದುವೆ ಅರೇಂಜ್ಡಾ ಅಥವಾ ಲವ್ ಮ್ಯಾರೇಜಾ..?

ಈ ನನ್ನ... ಕಲರಿಗೆ ಯಾರು ಲವ್ ಮಾಡ್ತಾರೆ? ನನ್ನ ಅಕ್ಕನ ಸಂಭಂಧದಲ್ಲೇ ಆಯ್ತು, ಮೊದಲೊಮ್ಮೆ ಬೇಡ ಅಂದಳಂತೆ, ನಂತರ ಎಲ್ಲಾ ಒಪ್ಪಿಸ ಬೇಕಾದರೆ ೬ ತಿಂಗಳು ಕಳೆದಿತ್ತು. .

ಮತ್ತೆ ಮಕ್ಕಳು..?

"ನನಗಂತೂ ಬೇಕು ಅನ್ನಿಸುತ್ತೆ, ಅವಳೆ ಈಗ ಬೇಡ ಸ್ವಲ್ಪ ಫ್ರೀ ಯಾಗಿಯೇ ಇರೋಣ, ಆಮೇಲೆ ಹೇಗಿದ್ದರೂ ತೊಳಲಾಟ ಇದ್ದದ್ದೇ ಅಂದಳು. ಇನ್ನೇನಾದ್ರೂ ಮಾಡಿಕೊಂಡರೆ ಕಷ್ಟ .... ಅಂತ ಒಪ್ಪಿ ಬಿಟ್ಟಿದ್ದೆ... ಈಗ ನೋಡಿ ನಾಲ್ಕೈದು ವರುಷವಾದರೂ ಮತ್ತೆ ಸುದ್ದಿಯೇ ಇಲ್ಲ."

ಬಿಡಿ ಅವಳೇ ಬಂದಳು..

ಹೇಗಿದೆ ನಿಮ್ಮ ಕೆಲಸ ..?

"ತುಂಬಾನೇ ಚೆನ್ನಾಗಿದೆ , ನನ್ನ ಬಾಸ್ ಗೆ ನಾನಿಲ್ಲದೇ ದಿನವೇ ಹೋಗುವುದಿಲ್ಲ ಗೊತ್ತಾ? ಹೇ ಚಾಕ್ಲೇಟು!!! ನನ್ನ ಫೇವರೈಟ್ , ಯಾರಿಗೆಂತ ತಂದ್ರೀ, ನಿಮಗೂ ಇದೇ ಇಷ್ಟಾನಾ..?"

"ಇಲ್ಲ ನಮ್ಮ ಚಿಕ್ಕವಳಿಗೆ ಸ್ನೇಹಿತೆಯರು ಜಾಸ್ತಿ, ಆಗಾಗ್ಗೆ ಬರ್ತಾರಲ್ಲ ಅವರಿಗೆಂತ ತಂದು ಇಟ್ಟಿದ್ದೆವು. ತಗೊಳ್ಳಿ...."




ಕೊಂಡಿ ೩


ಹಲಕೆಲವೊಮ್ಮೆ ಕಾಡಿನ ಕಾಳ್ಗಿಚ್ಚು ಪಾಪದ ಹರಿಣಗಳ ಗೊರಸಿನಿಂದಲೂ ಶುರುವಾಗಿ ಹರಡುತ್ತದೆ.


ಮಿ ಅನೇಕ್ ಎನ್ರೀ ಮಾಡಿದ್ದು ನೀವು, ನಿಮ್ಮ ಒಂದೇ ಒಂದು ನಿರ್ಧಾರದಿಂದಾಗಿ ಕಂಪೆನಿಗೆ ನಾಲ್ಕು ಕೋಟಿ ನಷ್ಟವಾಯ್ತಲ್ಲ, ಅದನ್ನ ಯಾರು ಭರಿಸ್ತಾರೆ ಹೇಳಿ,

ನಾನೇನೂ ಮಾಡಿಲ್ಲಾ ಸರ್!! ಅತುಲ್ಲ್ ರವರೇ ನನಗೆ ಹೇಳಿದ್ದರು ತುಂಬಾನೇ ಅರ್ಜೆಂಟ್ ಇದು ಮತ್ತೆಲ್ಲಾ ಆಮೇಲೆ ನೋಡಿಕೊಳ್ಳೋಣ, ಈಗ ನೀವು ಕಾಂಟ್ರೇಕ್ಟ್ ಸೈನ್ ಮಾಡಿ ಅಂದರು, ಮುನ್ನೂರಾ ನಲವತ್ತು ಪೇಝಿನ ಕಾಂಟ್ರಕ್ಟ್ ಅದು ಡೈರೆಕ್ಟರ್ರೇ ನನ್ನ ಮೇಲೆ ಕುಳಿತು ಸೈನ್ ಮಾಡಿ ಅಂದರೆ ಇನ್ನೇನು ಮಾಡಲಿ ಸಾರ್!!

ಅಲ್ಲಾ ರೀ... ಅವರು ಹಾಗೆ ಹೇಳ್ತಾರೆ ನಿಜ, ಅದಕ್ಕೇ ನೀವು ನೋಡದೇ ಸೈನ್ ಮಾಡೋದಾ..? ಈಗ ಇದಕ್ಕೆ ಉತ್ತರ ನೀವೇ ಕೊಡಬೇಕು ತಾನೇ?

ಅದೂ ಅಲ್ಲದೇ ಇನ್ನೊಂದು ಮಂಗತ್ ರಾಮ್ ಪ್ರಾಜೆಕ್ಟ್ ನಲ್ಲಿ ನೀವೇ ಅವರಿಗೆ ಲಾಸ್ ಮಾಡಿದ್ದೀರಿ ಅಂತ ಹೇಳ್ತಾ ಬಂದಿದ್ದಾರೆ ಅದೇನು ವಿಷಯ..?

ಸರ್ ಆದಿನ ಆಫೀಸಲ್ಲಿ ಸ್ಟಾಫ್ ಯಾರೂ ಇದ್ದಿರಲಿಲ್ಲ, ಅತುಲ್ ನನ್ನ ಹತ್ತಿರಾನೇ ಫೋನ್ ಮಾಡಿ ಈ ಪ್ರಾಜೆಕ್ಟ್ ನಲ್ಲಿ ಯಾರ್ಯಾರು ಎಷ್ಟೆಸ್ಟು ಲೋ ಅಂತ ಕೇಳಿದ್ದರು ಹಂಗಂತ ನಾನು ಬಂದ ಕೋಟ್ ನಲ್ಲಿ ಕಂಪ್ಯೂಟರ್ ನೋಡಿ ರಾಮ ಕೃಷ್ಣ ಅವರದ್ದು ಅತ್ಯಂತ ಕಡಿಮೆಯಿದೆ ಟೋಟೆಲ್ ಹೇಳಿದ್ದೆ ಅಷ್ಟೇ, ನಂತರ ನೋಡಿದ್ರೆ ರಾಮಕೃಷ್ಣ ಕಂಪೆನಿಗಿಂತ ಮಂಗತ್ ರಾಮ್ ನವರು ಎರಡು ಲಕ್ಷ ಕಡಿಮೆ ಕೋಟ್ ಮಾಡಿ ಕಳುಹಿಸಿದ್ದರು ಮಾರನೆಯ ದಿನ, ಸರ್ ಆದರೆ ಅಲ್ಲಿಯವರೆಗೆ ನಮಗೆ ಬಂದ ಕೋಟ್ ಚೆಕ್ ಮಾಡಿದಾಗ ನಾನು ಹೇಳಿದ್ದಕ್ಕಿಂತ ನಾಲ್ಕು ಲಕ್ಷ ಹೆಚ್ಚಾಗಿತ್ತು ಯಾಕೆಂದರೆ ರಾಮಕೃಷ್ಣರವರು ಕೆಲವೊಂದು ರೇಟೇ ಕೋಟ್ ಮಾಡಿರಲಿಲ್ಲ. ಅದು ಗೊತ್ತಾದದ್ದು ಸೋಮವಾರ. ನಾನು ಹೇಳಿದ್ದು ನಮ್ಮ ಬಾಸ್ ಗೆ ಮಾತ್ರ.

ಅಂದರೆ ನಾನೇ ಮಂಗತ್ ನವರಿಗೆ ತಿಳಿಸಿದೆ ಅಂತಾನಾ ನಿಮ್ಮ ಅರ್ಥ? ಮಿ. ಅನೇಕ್ ಯು ಆರ್ ಟೂ ಮಚ್!!

"ಅದಲ್ಲಾ ಸಾರ್......"

"ನಾನು ಇದನ್ನು ಬೋರ್ಡ್ ಮೀಟಿಂಗ್ ನಲ್ಲಿ ಇಡ್ತೇನೆ,.... ಒಂದು ರೆಸ್ಪಾನ್ಸಿಬಲ್ ಹುದ್ದೆಯಲ್ಲಿದ್ದುಕೊಂಡು ನೀವು ಮಾಡುವ ಕೆಲಸ ಇದೇನಾ? ..ಇದೆಲ್ಲಾ ಇತ್ಯರ್ಥವಾಗುವ ಸಮಯದ ವರೆಗೆ ನೀವು ರಜೆಯಲ್ಲಿರಿ... ಯೂ ಆರ್ ಡಿಸ್ಮಿಸ್ಡ್!!!"


ಅವರಿಬ್ಬರೂ ತೆರಳಿದ ಮೇಲೂ ಅಚೇತನನಂತಾಗಿದ್ದ ಅನೇಕ್


ತನ್ನ ಏ ಸಿ ಚೇಂಬರ್ ನಲ್ಲೂ ಕುಳಿತು ಬೆವರಿದ್ದ , ನೋಡ ನೋಡುತ್ತಿರುವಂತೆಯೇ ತಾನೇ ಕೈಯಾರೆ ಕಟ್ಟಿದ ಸೌಧವೊಂದು ಧರೆಗುರುಳಿತ್ತು. ತನ್ನ ತಪ್ಪೇ ಇಲ್ಲದೇ ವ್ಯಾಘ್ರಗಳ ಬಾಯಿಗೆ ಎಡತಾಕುವ ಹರಿಣನಂತಾಗಿತ್ತು ಪರಿಸ್ಥಿತಿ. ತನ್ನ ಮಾತು ಯಾರೂ ನಂಬುವುದೇ ಇಲ್ಲವಲ್ಲ ಈಗ. ಯಾಕೋ ತನ್ನ ಲಕ್ಕೇ ಉಲ್ಟಾ ಹೊಡೆದ ಹಾಗೆ ಆಯ್ತು. ತಾನು ಈ ಖುರ್ಚಿಗೆ ಬರುವ ಮೊದಲೇ ಚೆನ್ನಾಗಿದ್ದೆ. ಎಲ್ಲರ ಹತ್ತಿರಾನೂ ಒಳ್ಳೆಯ ಮಾತೇ ಕೇಳಿಸಿಕೊಂಡು ಬಂದಿದ್ದ, ತನ್ನ ಒಂದೊಂದೂ ಪ್ರಾಜೆಕ್ಟ್ ತನ್ನದೇ ಒಂದು ಮಗುವಿನ ಹಾಗೆ ತನ್ನದೆಂಬಂತೆ ನೋಡಿ ಕೊಳ್ಳುತ್ತಿದ್ದ ಆತನಿಗೆ ಈಗಿನ ಈ ಬೆಳವಣಿಗೆ ಜೀರ್ಣಿಸಿ ಕೊಳ್ಳಲೇ ಆಗುತ್ತಿಲ್ಲ




ಕೊಂಡಿ ೪


ಪಯಣ ಬರೇ ೧೦-೧೫ ನಿಮಿಷದ್ದಾದರೂ ಅದು ಧೀರ್ಘವಾಗಿತ್ತು ಅನ್ನಿಸಿತ್ತು ಈತನಿಗೆ. ಮಾಲ್ ತಲುಪಿ ಹೆಚ್ಚುಕಡಿಮೆ ಓಡುತ್ತಾ ಎತ್ತಿಗೆಯನ್ನು ಹತ್ತಿ ಅದರಲ್ಲೂ ಮೆಟ್ಟಲು ಹತ್ತುತ್ತಾ ಕ್ರಮಿಸಿದ. ಇದಿರಿಗೆ ಸಿಗುತ್ತಿರುವವರನ್ನು ಬದಿಗೆ ಸರಿಸುತ್ತಾ ಸಿನೇಮಾ ಸಮುಚ್ಚಯದ ಮುಖ್ಯ ಪ್ರಾಂಗಣ ತಲುಪಿ, ಟಿಕೇಟ್ ನ ಒಂದು ಭಾಗ ಹರಿದ ಸೆಕ್ಯುರಿಟಿಯ ಕೈಯ್ಯಿಂದ ಕಸಿದೇ ಬಿಟ್ಟಿದ್ದ. ಈ ಕೆಟ್ಟ ಆತುರವನ್ನು ದ್ವಾರದವನು ಗಮಸಿಸಿ ತನ್ನ ಟಾರ್ಚನ್ನು ಗುರಿಯತ್ತ ತೋರಿಸಿದ. ಸೀಟು ಅ ೨ ತಲುಪುವದರೊಳಗಾಗಿ ಸುಮಾರು ೩-೪ ಜನರ ಕಾಲು ತುಳಿದು ಹಲವರ ಮಗ್ಗುಲಲ್ಲಿ ಕುಳಿತೆದ್ದಿದ್ದ. ಇನ್ನೇನು ಯಾರದ್ದೋ ಮೇಲೆಯೇ ಬೀಳಬೇಕೆನ್ನುವಾಗ ಎರಡು ಕೋಮಲ ಹಸ್ತಗಳು ಈತನನ್ನು ಪಕ್ಕಕ್ಕೆಳೆದು ಕೊಂಡವು.

"ಅಂತೂ ಬಂದ್ಯಲ್ಲಾ" ಪಿಸುನುಡಿ

"ಬಾರದೇ... ? ಅದೂ ನಿನ್ನಂತಹ ಸುಂದರಿ ಕರೆದಾಗ..?"

"ಇದೇನಿದು.? ಛಳಿಯಲ್ಲೂ ಕೋಟು..?"

ಅರೆರೇ ... ಅದು ನನ್ನ ಅನ್ನ ಕೊಡೋ ಗೌನು, ಬೇರೆ ಎಲ್ಲಿಡಲಿ.. ಇದನ್ನ!! ನೀನು ಕರೆದೆ ಅಂತ ಲ್ಯಾಬ್ ನಿಂದ ಓಡಿ ಬಂದೆ"

ಕೈಯ್ಯಲ್ಲಿದ್ದ ಬಿಳಿಕೋಟು ಪಕ್ಕದ ಖಾಲಿ ಸೀಟಿನ ಮೇಲಿರಿಸಿದನಾತ.

"ಸೀಟು ತಲುಪುವುದರೊಳಗಾಗಿ ೫-೬ ಜನರ ಕಾಲ್ತುಳಿದು, ಹಲವರ ಮಗ್ಗುಲಲ್ಲೇ ಕುಳಿತೆದ್ದಿದ್ದೆ ಗೊತ್ತಾ?

ಈಗ ಕುಳಿತ ಹಾಗಾ..?

ಬಸ್ಸು ಹತ್ತುವುದರೊಳಗೇ ಓಡುತ್ತಾ ದಾರಿಯಲ್ಲಿದ್ದ ಅದೆಷ್ಟೋ ಜನರನ್ನು ಢಿಕ್ಕಿ ಹೊಡೆದು ಬೈಸಿಕೊಂಡಿದ್ದೆ"

"ಅಸ್ಟು ಆತುರವಾ?"

"ಇರಲ್ಲವಾ..?"

"ನಂಗೊತ್ತಿಲ್ಲಪ್ಪಾ.."

"ನಾನ್ಹೇಳಿದ್ದು ತಂದೆಯಾ?"

"ಮತ್ತೆ........." ಅವಳ ಕೈಯ್ಯನ್ನು ಹಿಡಿದು ನೇವರಿಸುತ್ತಾ ಕೊಟ್ಟ ತಾನು ತಂದಿದ್ದ ಪಾರ್ಸೆಲ್ ಒಂದನ್ನು..

.......................................

ಸಿನೇಮಾ ಯಾರಿಗೆ ಬೇಕು?




ಕೊಂಡಿ ೫


.ರೀ .. ಕೇಳಿದ್ರಾ

ನೀನು ಹೇಳಿದ್ದಂತೂ ಕೇಳ್ತಾ ಇದ್ದೇನೆ"

"ಅಲ್ಲ... ರೀತಿ ಮತ್ತು ಅನೇಕ್ ರದ್ದು ಅರೇಂಜ್ಡ್ ಮ್ಯಾರೇಜ್ ಆದರೂ ಕೂಡಾ ತುಂಬಾ ಕಷ್ಟದಲ್ಲೇ ಆಗಿತ್ತಂತೆ ಗೊತ್ತಾ"

ಅಂದರೆ...

"ಅವಳು ಮದ್ವೆ ಆಗಲ್ಲ ಅಂತ ಹಠಾನೇ ಹಿಡಿದಿದ್ದಳಂತೆ ಗೊತ್ತಾ, ನಾನು ಸತ್ತೇ ಹೋಗ್ತೇನೆ ಮದುವೆಯಾಗಲ್ಲ ಅಂತಿದ್ದಳಂತೆ. ಆದರೂ ಅಕ್ಕನ ಬಲವಂತದಿಂದ ಈ ಮದುವೆ ನಡೆಯಿತಂತೆ."

"ನನಗೂ ಅನೇಕ್ ಅದೇ ಹೇಳಿದ್ದನಲ್ಲ"

"ಅಲ್ಲ ಇನ್ನೂ ಕೇಳಿ......ಮೊದಲ ಆರು ತಿಂಗಳು ತವರು ಮನೆಯಲ್ಲೇ ಇದ್ದಳಂತೆ"

"ಆಮೇಲೆ....??"

"ಸುಮಾರು ಒಂದು ವರ್ಷ ಆಕೆ ಆತನ ಮುಖವನ್ನೂ ಸರಿಯಾಗಿ ನೋಡುತ್ತಿರಲಿಲ್ಲವಂತೆ"

ಆಮೇಲೆ ಪುನಃ ಎಲ್ಲರೂ ಬಂದು ... ಪಂಚಾಯಿತಿಗೆ ಮಾಡ್ಸಿ ಅವಳನ್ನು ಕೆಲಸಕ್ಕೆ ಸೇರಿಸುವ ಬಗ್ಗೆ ಮಾತನಾಡಿ ಹೋಗಿದ್ದರಂತೆ..ಆದರೆ ಒಂದು ತಿಂಗಳಾದರೂ .. ಈತ ಒಪ್ಪಿಗೆ ಕೊಡದೇ ಇದ್ದುದರಿಂದ ಒಮ್ಮೆಲೇ ನಿದ್ರೆ ಮಾತ್ರೆ ತಿಂದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಳಂತೆ.. ಆಗ ಆತ ಮನಸ್ಸಿಲ್ಲದ ಮನಸ್ಸಿಂದ ಒಪ್ಪಿಗೆ ಕೊಟ್ಟನಂತೆ, ಅವರಿಗೆ ಒಂದು ಹೆಣ್ಣು ಮಗುವೂ ಆಗಿತ್ತಂತೆ.... ಆದರೆ ಬರೇ ಎರಡೇ ತಿಂಗಳಲ್ಲಿ ಅದು ಅಸು ನೀಗಿತಂತೆ.

"ಅಲ್ಲಾ ಇಷ್ಟೆಲ್ಲಾ ನಿನಗೆ ಯಾರು ಹೇಳಿದರೂ ಅಂತ....."

ಮತ್ತೇನು ಅಸಲಿ ವಿಷಯ ಗೊತ್ತಾ... ಆ ಮಗುವನ್ನೂ ಅವಳೇ ಕೊಂದಿದ್ದಳಂತೆ...

ಇದೀಗ ಅತೀಯಾಯ್ತು..... ಅಲ್ಲಾ ಯಾವುದಾದರು ತಾಯಿ ತನ್ನದೇ ಮಗುವನ್ನು ... ಅದೂ ಎರಡು ತಿಂಗಳ ಮಗುವನ್ನು ಕೊಲ್ತಾಳಾ..?

ಅದೂ ...ತನ್ನ ಮಗುವನ್ನು ಡಾಕ್ಟರ್ ಗೆ ತೋರಿಸುವ ನೆಪದಲ್ಲಿ, ಡಿಸೆಂಬರಿನ ಬೆಳಗಿನ ಚಳಿಯಲ್ಲಿ ಬಟ್ಟೆಯೇ ಹೊದೆಸದೇ ಸ್ಕೂಟರಿನಲ್ಲಿ ಅಡ್ಡಾಡಿಸಿ......"

ಯಾರೇ ನಿನಗೆ ಇದೆಲ್ಲಾ ಹೇಳಿದ್ದು.... ದಂಗಾಗಿ ನಿಂತ

ಅವಳದ್ದೇ ಅಕ್ಕ....ನೀತಿ!!!, ತಾನೇ ಇದಿರು ನಿಂತು ಅವಳ ಮದುವೆ ಮಾಡಿಸಿದೋಳು....ನಿನ್ನೆ ಇಲ್ಲಿಗೇ ಬಂದಿದ್ದಳು. ಸ್ವಲ್ಪ ಜಾಗೃತೆ ಹೇಳಿ ಅನೇಕ್ ನಿಗೆ ಅಂದು ಹೋದಳು.

ಯಾಕೆ ಅವಳು ತನ್ನದೇ ತಂಗಿಗೆ ಬುದ್ದಿ ಹೇಳಬಾರದಾ?"

"ಇಲ್ಲ ಈಗ ಅವಳು ಅಕ್ಕನ ಮಾತೂ ಕೇಳುತ್ತಿಲ್ಲವಂತೆ ಅವರೆಲ್ಲಾ ಪಂಚಾಯಿತಿಗೆಂತ ಬಂದಾಗಲೇ ಹೇಳಿ ಬಂದಿದ್ದಳಂತೆ, ಇನ್ನು ತನ್ನ ಮನೆಗೆ ಸಂಭಂಧಿಕರು ಯಾರೂ ಬರಲೇ ಬಾರದು ಹಾಗಿದ್ದರೇ ಮಾತ್ರ ತಾನು ಪುನಃ ಇವನೊಂದಿಗೆ ಇರ್ತೇನೆ ಅಂತ"

"ಅಬ್ಬಾ... ...!!!"

"ಅಷ್ಟೇ ಅಲ್ಲಾ ಇನ್ನೂ ಇದೆ.... ನೀತಿ ಇಲ್ಲಿಗೆ ಬಂದಾಗಲೇ ರೀತಿಯನ್ನು ಯಾರೊಂದಿಗೋ ನೋಡಿದ್ದಳಂತೆ...."

" ಅದಕ್ಕೇ.... ಕೆಲ್ಸದಲ್ಲಿ ಅಂದರೆ ಸ್ನೇಹಿತರೂ ಇರಬಹುದಲ್ಲಾ "

ನಿಮಗೆ ಯಾಕೆ ಗೊತ್ತಾಗಲ್ಲ........ಸ್ನೇಹಿತರಿಗೆ ... ಒಂದು ಮಿತಿ ಇರತ್ತಲ್ವಾ,....?

ಅಂದರೆ...

ಅವಳಿಗೆ ಅವನೊಂದಿಗೆ ಮದುವೆಗೆ ಮೊದಲೂ ಸಂಭಂಧ ಇತ್ತಂತೆ , ಬೇರೆ ಜಾತಿ ಅಂತ ಊರವರು ಬಿಡಲಿಲ್ಲವಂತೆ

"ನನಗೆ ಜೀರ್ಣಿಸಲಾಗುತ್ತಿಲ್ಲ ಇದು,.../...ಇದೆಲ್ಲಾ ತೀರಾ ಪರ್ಸನಲ್ ಅನ್ನಿಸೋಲ್ವಾ ನಿನಗೆ"

ನನಗೆ ಅಯ್ಯೋ ಪಾಪ ಅನ್ನಿಸುತ್ತೆ ಅನೇಕ್ ನಬಗ್ಗೆ ನೀವು ಏನಾದ್ರೂ ಮಾಡಿ ಅವನಿಗೆ ಹೇಳಿ




ಕೊಂಡಿ ೬


ಪುಟ್ಟಾ ನಿನ್ನೆ ರಾತ್ರೆ ಪಕ್ಕನೆ ಎಚ್ಚ್ರವಾಯ್ತು. ನೋಡ್ತೇನೆ ಪಕ್ಕದಲ್ಲಿ ನೀನಿಲ್ಲ.ಸುಮ್ಮನೆ ಕತ್ತಲೆಯಲ್ಲಿ ಕೈಯಾಡಿಸಿದರೆ ದಿಂಬಿನ ಕೆಳಗೆ ಕೈಗೇನೋ ತಗುಲಿತು.ನೋಡಿದರೆ ... ನಗು ಬಂತು ...ಏನು ಗೊತ್ತಾ ಸುಮಾರು ಎರಡು ಫೂಟು ಉದ್ದದ ಫ್ಯೂಸ್ ವಾಯರ್.ನಿನ್ನೆಯೊ ಮೊನ್ನೆಯೋ ನಾನೇ ನಿನಗೆ ಹೇಳಿದ್ದು ನೆನಪಿಗೆ ಬಂತು, ಪದೇ ಪದೇ ಫ್ಯೂಸ್ ಹೋಗುತ್ತೆ ಈ ಸಾರಿ ಸ್ವಲ್ಪ ದಪ್ಪ ವಾಯರೇ ಹಾಕಬೇಕು, ಅಂತ ಆದರೆ ಅದಕ್ಕೆಲ್ಲ ನೀವು ತಲೆಬಿಸಿ ಮಾಡ್ಕೋಬೇಡಿ ನಾನು ನೋಡಿಕೊಳ್ತೇನೆ ಅಂದದ್ದು.



ಕೊಂಡಿ ೭


ಅಲ್ಲಮ್ಮಾ ಅವರಿಗೆ ನಾವು ಬರುವುದು ಗೊತ್ತಾ? ಇಲ್ಲವಾದರೆ ನಮಗೆ ಅವರು ಏನೂ ಮಾಡಿರದೇ ಇದ್ದರೆ..?

ಇಲ್ಲಮ್ಮಾ ನಿಶಾನ ಬಗ್ಗೆ ನನಗೇ ಎಲ್ಲಾ ಗೊತ್ತು, ನಾನು ಆಫೀಸಿನಿಂದ ನೇರವಾಗಿ ಬರುತ್ತೇನೆ ಅಂತ ಹೇಳಿದ್ರೇ ಸಾಕಿತ್ತು, ಏನಾದರೂ ತಿಂಡಿ ಮಾಡಿಯೇ ಇಟ್ಟಿರುತ್ತಿದ್ದಳು ಗೊತ್ತಾ? .

ಒಂದು ವೇಳೆ ಏನೂ ಮಾಡಿರದೇ ಇದ್ದರೆ?

ಹಾಗಾಗಲು ಸಾಧ್ಯವೇ ಇಲ್ಲಮ್ಮಾ, ನೋಡು ಅವಳಮನೆಗೆ ಹೋದ ಮೇಲೆ ಗೊತ್ತಾಗುತ್ತೆ ನಿಂಗೆ ನಾನು ಹೇಳಿದ್ದು ಸರಿ ಅಂತ.

ಅದು ಸರಿ ಅಮ್ಮ... ಆ ಅಂಕಲ್ ಯಾಕೆ ಸತ್ತರು?

ಗೊತ್ತಿಲ್ಲ ಮರಿ, ಅದೇನೋ ಒಂದು ವಾರದಿಂದ ಅವರಿಗೆ ಹುಷಾರಿಲ್ಲ ಅಂತಿದ್ದರಂತೆ.

ಮತ್ತೆ........ ಆಂಟಿ ಡಾಕ್ಟರ್ ಹತ್ತಿರ ಕರೆದೊಯ್ದಿರಲಿಲ್ಲವಾ?

ಪಕ್ಕದಲ್ಲೇ ಔಷಧಿಯಿತ್ತಲ್ವಾ?

ಪಾಪ ಆಸ್ಪತ್ರೆಗೆ ಸೇರಿಸಿದ್ದರೆ ಬದುಕ್ತಿದ್ದರೋ ಏನೋ ಅಲ್ವಾ ಮಮ್ಮೀ

ಹೌದು ಕಣೇ

ಅಲ್ಲಮ್ಮಾ, ಆಂಟಿ ಪಕ್ಕದ ಅಂಕಲ್ಲನ್ನು ತಬ್ಬಿಕೊಂಡು ಸಿನೇಮಾದವರ ಹಾಗೆ ಅಳುತ್ತಿದ್ದರಲ್ಲಾ ಯಾರಾತ?

ಅವನು ಆಫೀಸಿನವರಂತೆ

ಯಾರ ಆಫೀಸು? ಅಂಕಲ್ದಾ ಆಂಟೀದ್ದಾ?

ಪಾಪ, ತುಂಬಾ ಬೇಸರವಾಯ್ತಲ್ಲಾ ಪುಟ್ಟಾ ಅದಕ್ಕೇ ಅಳುತ್ತಿದ್ದರು. ಹಾಗೆಲ್ಲಾ ಕೇಳಬಾರದು

ಆಯ್ತಮ್ಮಾ.

ಮತ್ತೆ ಇನ್ನು ನಂಗೆ ದಿನಾ ಕಾಫಿ ಮಾಡಿಕೊಡೋರು ಯಾರು ಅಂತ ಅತ್ತಿದ್ದರಲ್ಲಾ ಆಂಟಿ, ಹಾಗಾದ್ರೆ ದಿನಾ ಅವರಿಗೆ ಅಂಕಲ್ ಕಾಫಿ ಮಾಡಿ ಕೊಡ್ತಾ ಇದ್ದರಾ ಅಮ್ಮ?

ಸುಮ್ನಿರು ಪುಟ್ಟಾ.

ಅಲ್ಲಮ್ಮಾ ಮತ್ತೆ ಆಂಟೀ ಮನೆಯಲ್ಲಿ ಮಾಸ್ಕ್ ನೋಡಿದೆ ಮಮ್ಮೀ, ನೀರಿನೊಳಗೆ ಮುಳುಗಿ ಆಟ ಆಡುವಂತಹದ್ದು, ಅವರಿಗ್ಯಾಕದು..?

"ಕೆಲವರಿಗೆ ಹಳೆತೆಲ್ಲ ಸಂಗೃಹಿಸಿಕೊಳ್ಳೋ ಅಭ್ಯಾಸ ಇರತ್ತೆ ಪುಟ್ಟಾ..."

"ಹಳತಲ್ಲ ಅಮ್ಮೀ ತೀರಾ ಹೊಸದು ಕಲರೂ ನಂದೇ.... ನೀಲಿ!! ಅಂತಹದ್ದೇ ನನಗೂ ತೆಗೆಸಿ ಕೊಡ್ತೀಯಾ ಮಮ್ಮೀ...?"

ನೋಡೋಣ ಅಪ್ಪನಲ್ಲಿ ಹೇಳ್ತೇನೆ ಆಯ್ತಾ.

ಓ ಕೆ ಮಮ್ಮೀ.


ಮರೆತ ಕೊನೆ ಕೊಂಡಿ


ಸಡನ್ನಾಗಿ ಏನಾದರೂ ಅತೀ ಸಂತೋಷದ ಸುದ್ದಿ ಕೇಳಿದರೂ, ಅಥವಾ ಅತ್ಯಂತ ದುಃಖದ ವಿಷಯ ಕೇಳಿದರೂ ಹೃದಯಾಘಾತವಾಗುತ್ತದೆ ಸ್ವಲ್ಪ ದುರ್ಬಲವಾಗಿದ್ದವರಿಗೆ. ಸರಿಯಾಗಿರುವವರೂ, ಅತ್ಯಂತ ಟೆನ್ಷನ್ ಗೊಳಪಟ್ಟರೆ, ಬೇಸರವಾದಾಗ ನಿದ್ರೆ ಬರದೇ ಮಾತ್ರೆಗೆ ಶರಣಾಗುವುದೂ ಇದೆ. ಇದರ ಡೋಸೇಜು ಜಾಸ್ತಿಯಾದರೆ ಕೋಮಾ ಅಥವಾ ಸಾವು ಕೂಡಾ ವಿಶೇಷವೇನಲ್ಲ. ಎತ್ತರವೆಂದರೆ ಅಲರ್ಜಿ ಅಥವಾ ಫೋಭಿಯಾ ಇರುವವರು " ಅಮ್ಯುಸ್ ಮೆಂಟ್ ಪಾರ್ಕಗಳಲ್ಲಿ ಆಘಾತ ಅನುಭವಿಸುವುದೂ ಇದೆ. ಚಾಕ್ಲೇಟ್ ಸುತ್ತಿ ತಂದ ಹಳೇ ಪೇಪರಿನಲ್ಲಿ ಗ್ಯಾಸ್ ಚೇಂಬರ್, ನೇಣು, ಫೈರಿಂಗ್ ಸ್ಕ್ವಾಡ್, ,ಮತ್ತು ವಿದ್ಯುತ್ ಖುರ್ಚಿಯಲ್ಲಿ ನ ಮರಣದಂಡನೆಯ ವಿವರಗಳಿದ್ದುವು. ಬದಿ ಬದಿಯಲ್ಲಿ ಹರಿದು ಹೋಗಿದ್ದರೂ ಅಕ್ಷರಗಳನ್ನು ಕೂಡಿಸಿ ಓದ ಬಹುದಾದಂತಹ ಗ್ಯಾಸ್ ಚೇಂಬರಿನ ವಿವರ ಹೀಗಿತ್ತು. ಶಿಕ್ಷೆಗೆ ಒಳಗಾದ ಅಪರಾಧಿಯನ್ನು ಗಾಳಿ ಸೋರದ ಕೋಣೆಯಲ್ಲಿ ಆಸನಕ್ಕೆ ಕಟ್ಟಿ ಕೂರಿಸಲಾಗುತ್ತದೆ. ಆಜ್ಞೆಬಂದಾಗ ಒಂದು ಕೀಲು ಎಳೆದಾಗ ಆಸನದ ಹಿಂದೆ ತಟ್ಟೆಗೆ ನಳಿಕೆಯ ಮೂಲಕ ಹೈಡ್ರೋಕ್ಲೋರಿಕ್ ಆಮ್ಲ ಹರಿಯುತ್ತದೆ, ತಟ್ಟೆ ತುಂಬಿದಾಗ ಇನ್ನೊಂದು ಕೀಲು ಎಳೆದರೆ ಬೇರೊಂದು ನಳಿಕೆಯ ಮೂಲಕ ಸಯನೈಡ್ ( ಪೊಟೇಷಿಯಮ್ ಅಥವಾ ಸೋಡಿಯಮ್ ಸಯನೈಡ್) ನ ಹರಳುಗಳು ತಟ್ಟೆಗೆ ಬಂದು ಬೀಳುತ್ತವೆ. ರಾಸಾಯನಿಕ ಕ್ರೀಯೆ ನಡೆದು ವಿಷಕಾರೀ ಹೈಡ್ರೋಸೈನಿಕ್ ಅನಿಲದ ಬಿಳಿ ಹೊಗೆ ಸುತ್ತಿ ಸುತ್ತಿ ಏಳುತ್ತದೆ. ಅದನ್ನು ಸೇವಿಸಿದ ವ್ಯಕ್ತಿ ತಕ್ಷಣ ಸಾವನ್ನಪ್ಪುತ್ತಾನೆ.



Rate this content
Log in

Similar kannada story from Thriller