ಕಡಲ ತೀರ
ಕಡಲ ತೀರ
ವಾರಾಂತ್ಯದ ಮೋಜಿಗಾಗಿ, ಸುಮನ್ ತನ್ನ ಮಡದಿ ಮತ್ತು ಮಕ್ಕಳನ್ನು ಕರೆದುಕೊಂಡು ಜುಹು ಬೀಚಿಗೆ ಹೋದ. ಸಂಜೆಯ ಸಮಯದಲ್ಲಿ ಮಕ್ಕಳೆಲ್ಲರೂ ಕಡಲಿನ ಅಲೆಗಳಿಗೆ ಮೈ ಒಡ್ಡಿ ಚೆನ್ನಾಗಿ ಆಟಾವಾಡಿ ದಣಿದರು. ಮೂವರು ಮಕ್ಕಳಲ್ಲಿ ಚಿಕ್ಕ ಮಗುವನ್ನು ಹೆಗಲ ಮೇಲೆ ಹೊತ್ತ ಸುಮನ್, ಕಡಲ ಮರಳಿನಲ್ಲಿ ಅಡ್ಡಾಡುತ್ತಿದ್ದಾಗ, ಅಲೆಗಳ ಜೊತೆ ಅವನ ಕಾಲ ಬುಡದಲ್ಲಿ ಸಿಕ್ಕಿದ ಒಂದು ಪುಟ್ಟ ನಾಯಿಮರಿಯನ್ನು ನೋಡಿ ,ಅವನಿಗೆ ಮತ್ತು ಅವನ ಪುಟ್ಟ ಮಕ್ಕಳಿಗೆ ಆಶ್ಚರ್ಯವಾಯಿತು. ಕಡೆಗೂ ಅವನ ದೊಡ್ಡ ಮಗ ಪಿಂಟು ಆಡುವಾಗ ಸಮುದ್ರದಲ್ಲಿ ತೇಲಿಕೊಂಡು ಹೋಗಿದ್ದ ಆ ನಾಯಿಮರಿ ಆಟಿಕೆ ಮತ್ತೆ ಅವನ ಕಾಲ ಬುಡದಲ್ಲೇ ಬಂದು ಸೇರಿದಾಗ, ಅವನ ಪರಿವಾರದವರೆಲ್ಲ ಕಳೆದುಕೊಂಡಿದ್ದ ಆಟದ ನಾಯಿಮರಿಯನ್ನು ಖುಷಿಯಿಂದ ನೋಡುತ್ತಿದ್ದರು.
