ಹದಿಹರೆಯದವರು
ಹದಿಹರೆಯದವರು
ಸುಂದರ ಬೆಳಗೂ ಕೂಡಾ ಒಮ್ಮೊಮ್ಮೆ ಹಿತವಾಗುವುದರ ಬದಲು ಹಿಂಸೆ ಅನ್ಸೋಕೆ ಶುರುವಾಗತ್ತೆ.. ಯಾಕೆ ಗೊತ್ತಾ..?! ಈ ಡ್ರಗ್ಸ ಅಡಿಕ್ಟ್ ಆದವರಿಗೆ ಅವರಿಗೆ ಬೇಕಾದದ್ದು ಸಿಗದಾದಾಗ.. ನಾನು ಕೋಮಲ.. ನಾನು 'ಗ್ರೀನರಿ ರಿಕವರಿ ಸೆಂಟರ್' ಅನ್ನೋ ಒಂದು ಡ್ರಗ್ ರಿಹ್ಯಾಬಿಟೇಶನ್ ಸೆಂಟರ್‌ನಲ್ಲಿಕೆಲಸ ಮಾಡ್ತಾ ಇರೋಳು.. ದಿನಾ ಬೆಳಗಾದ್ರೆ ಅದೇ ಗೋಳು.. ಹದಿನಾರು ಹದಿನೈದು ವರ್ಷದ ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಎಲ್ಲರೂ ಆ ಕೊಕೈನ್, ಗಾಂಜಾ ಅನ್ನೋ ಡ್ರಗ್‌ಗೆ ಬಲಿ ಆಗ್ತಾ ಇದಾರೆ.. ಇಲ್ಲಿ ತಂದೆ ತಾಯಿ ತಂದು ಬಿಟ್ಟು ಹೋಗೋ ಪೇಷಂಟ್‌ಗಳಿಗಿಂತ ಜಾಸ್ತಿ ಪೋಲಿಸರು ತಂದು ಬಿಡುವವರೇ ಜಾಸ್ತಿ..
ಅದೊಂದು ದಿನ ಬೆಳಿಗ್ಗೆ ಏನೂ ಗಲಾಟೆ ಇರಲಿಲ್ಲ.. ಯಾರೂ ಕೂಗಲಿಲ್ಲ ನರಳಲಿಲ್ಲ.. ಇಲ್ಲಿದ್ದ ಐವತ್ತು ಜನ ಗುಣಮುಖರಾಗಿ ಹೋಗಿದ್ದರು.. ಒಂದು ಎರಡು ಪೇಷಂಟ್‌ಗಳು ಮಾತ್ರ ಇದ್ದರು.. ಆಗ ಒಂದು ಆಂಬ್ಯಲೆನ್ಸ್ ಬಂದಿತ್ತು.. ಅದರ ಜೊತೆಯೇ ಒಂದು ಪೋಲೀಸ್ ಜೀಪ್.. ನನಗೆ ಈ ಹದಿಹರೆಯದವರ ಮೇಲೆ ಆಗಲೇ ಬೇಸರ ಬಂದಿತ್ತು.. ಇಂತಹ ಮಾರಕಾಸ್ತ್ರಕ್ಕೆ ಬಲಿಯಾಗ್ತಾ ಇದ್ದಾರಲ್ಲ ಅಂತ.. ಆಗ ಅಲ್ಲಿದ್ದ ಪೋಲೀಸರು ಒಬ್ಬರು 'ಡಾಕ್ಟರ್ ಕೋಮಲ್ ಪೇಷೆಂಟ್ ಇಸ್ ಇನ್ ಸಿವೀಯರ್ ಕಂಡಿಷನ್.. ಶೀ ಹ್ಯಾಸ್ ಬೀನ್ ರೇಪ್ಡ್ ಫಾರ್ ಫೈವ್ ಡೇಸ್ ಆ್ಯಂಡ್ ದೇ ಆರ್ ಗಿವಿಂಗ್ ಹರ್ ಅ ಡೇಂಜರಸ್ ಡ್ರಗ್ ಫಾರ್ ದೇರ್ ಸೆಟಿಸ್‌ಫ್ಯಾಕ್ಷನ್' ಎಂದು ಪೇಷಂಟ್‌ನ ತೋರಿಸಿದರು.. ಪೇಷಂಟ್‌ನ ನೋಡಿದ ನನಗೆ ಒಮ್ಮೆ ಕಾಲ ಕೆಳಗಿನ ನೆಲ ಬಿರಿದಂತೆ ಭಾಸವಾಯ್ತು.. ಆರು ವರ್ಷದ ಆ ಪುಟ್ಟ ಕಂದಮ್ಮ ರಕ್ತಸಿಕ್ತವಾಗಿ ಅಲ್ಲಿ ಒಕ್ಸೊಜನ್ ಮಾಸ್ಕ್ ಮೂಲಕ ಉಸಿರಾಡುತ್ತಿದ್ದಳು.. ತಕ್ಷಣ ನನ್ನಲ್ಲಿನ ವೃತ್ತಿ ಜಾಗೃತವಾಗಿ ಅವಳಿಗೆ ಟ್ರೀಟ್‌ಮೆಂಟ್ ನೀಡಿ ಅವಳ ಜೀಬ ಉಳಿಸಿದ್ದೆ.. ಆ ಮಗುವಿನ ಸುಂದರ ಮುಖದಲ್ಲಿ ಮುಗ್ಧತೆಯ ಬದಲು ಆ ಕಾಮ ಪಿಶಾಚಿಗಳ ಕ್ರೌರ್ಯತೆಯೇ ಮೆರೆಯುತ್ತಿತ್ತು.. ಆಡುತ್ತ ಕುಣಿಯುತ್ತ ಇರುವ ವಯಸ್ಸು ಆ ಕಂದಮ್ಮಂದು.. ಅದರ ತಂದೆ ತಾಯಿಯ ಪರಿಸ್ಥಿತಿ ನೆನೆದು ಮೈಯ್ಯೆಲ್ಲ ಬೆವರಿತ್ತು.. ದಿನಗಳೆದಂತೆ ಆ ಪುಟ್ಟ ಮಗು ಚೇತರಿಸಿಕೊಳ್ಳತೊಡಗಿತ್ತು.. ಅವಳ ಕೇಸ್ ಕೋರ್ಟಿನಲ್ಲಿ ನಡೆಯುತ್ತಿತ್ತು.. ತಮ್ಮ ಕ್ರೌರ್ಯವನ್ನ ರೆಕಾರ್ಡ್ ಮಾಡಿದ್ದರು ಆ ಕ್ರೂರಿಗಳು.. ಹಾಗಾಗಿ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿತ್ತು.. ಅವಳ ಕೇಸ ಹಿಯರಿಂಗ್ ಇದೆ ನೋಡೋಣ ಎಂದು ಹೋದವಳಿಗೆ ದೊಡ್ಡ ಶಾಕ್ ಕಾದಿತ್ತು.. ಆ ಮುದ್ದು ಕಂದಮ್ಮನನ್ನ ಹಿಂಡಿ ಹಿಪ್ಪೆ ಮಾಡಿದ್ದು, ನಾನು ಟ್ರೀಟ್ ಮಾಡಿದ ಹದಿಹರೆಯ ಮಕ್ಕಳು.. ಇನ್ನೂ ಹದಿನೆಂಟು ದಾಟದ ಎರಡು ಗಂಡು ಮತ್ತು ಎರಡು ಹೆಣ್ಣುಮಕ್ಕಳು.. ಹೆಣ್ಣುಮಕ್ಕಳೂ ಇಂತಹ ಕ್ರೌರ್ಯಕ್ಕೆ ಇಳಿದರೆ ಎಂದು ನನಗೆ ಆಘಾತವಾಗಿತ್ತು.. ಈ ಡ್ರಗ್ ಎಂಬ ಅಪಾಯಕಾರಿ ಅಸ್ತ್ರ ಎಂತಹ ಸದ್ಗುಣರನ್ನೂ ಮೃಗಗಳನ್ನಾಗಿ ಪರಿವರ್ತಿಸುತ್ತದೆ ಎಂಬುದು ನನಗೆ ಶಾಕ್ ನೀಡಿತ್ತು.. ಅವರನ್ನ ಅಲ್ಲಿ ನೋಡಿ ಕುಸಿದಿದ್ದ ನಾನು ಮತ್ತೆ ಏಳಲೇ ಇಲ್ಲ.. ಯಾಕಂದ್ರೆ ಅವರಿಗೆ ನಾನು ಮಾಡಿದ ಟ್ರೀಟ್‌ಮೆಂಟ್ ಫಲಕಾರಿಯಾಗಲಿಲ್ಲ ಎಂಬ ನೋವು ನನ್ನನ್ನು ಆಪೋಶನ ತೆಗೆದುಕೊಂಡು ಬಿಟ್ಟಿತ್ತು..
