STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಭಾರತ

ಭಾರತ

1 min
309

ನನ್ನ ದೇಶ ಭಾರತ,ಆಸೇತು ಹಿಮಾಲಯ ದವರೆಗಿರುವ ನನ್ನ ಈ ಸಂಪದ್ಭರಿತ ದೇಶವನ್ನು ಒಮ್ಮೆ ಸುತ್ತಿ ಬೇಕೆಂಬ ಆಸೆ. ಆದರೆ ವರ್ಷಗಳು ಕಳೆದರೂ ನನಗೆ ಅದು ಸಾಧ್ಯವಾಗಲಿಲ್ಲ. ಏಕೋ ನನ್ನಲ್ಲಿ ಒಂದು ರೀತಿಯ ನಿರಾಸೆ ಮೂಡಲು ಪ್ರಾರಂಭ ವಾಯಿತು. 


ಶ್ರೀ ಕೃಷ್ಣ ನಡೆದಾಡಿದ ಮಥುರಾ,ಗೋಕುಲ , ಬೃಂದಾವನ, ದ್ವಾರಕಾ, ರಾಮ ಹುಟ್ಟಿದ ಅಯೋಧ್ಯಾ, ಪ್ರಕೃತಿ ಯ ಸುಂದರ ನಗರಗಳಾದ ಕುಲು ಮನಾಲಿ, ಕಾಶ್ಮೀರ, ಮುಕ್ತಿ ಸ್ಥಳಗಳಾದ ಕಾಶಿ,ಕಾಂಚಿ, ಹರಿದ್ವಾರ, ಹೃಷಿಕೇಶ,ಬದರಿ ,ಕೇದಾರ ಮುಂತಾದ ಸ್ಥಳಗಳನ್ನು ನೋಡಬೇಕೆಂಬ ನನ್ನ ಆಸೆ ನನ್ನೊಳಗೇ ಉಳಿಯಿತು.


ಇಷ್ಟಲ್ಲದೆ, ಐತಿಹಾಸಿಕ ಸ್ಥಳಗಳು , ಕೈಗಾರಿಕಾ ನಗರಗಳು, ಗಿರಿವನಗಳು, ಬೆಟ್ಟ ಗುಡ್ಡ ಗಳನ್ನು ಕಂಡು ಬರಬೇಕೆಂಬ ಆಸೆಯೂ ಇದೆ.


ಕಡೆಗೂ ನನ್ನಂತರಾಳದ ಕೂಗು ಆ ದೇವರಿಗೆ ಕೇಳಿಸಿತೋ ಏನೋ?

ಇತ್ತೀಚೆಗೆ ಕೆಲವು ಟ್ರಾವೆಲ್ಸ್ ಮೂಲಕ ಹಲವಾರು ಪುಣ್ಯ ಕ್ಷೇತ್ರಗಳನ್ನು ಮೆಟ್ಟಿ ಬಂದಾಯಿತು. ಆದರೂ ಇನ್ನೂ ನೋಡುವ ಸ್ಥಳಗಳು ಬೇಕಾದಷ್ಟು ಇವೆ.


ದೇವತೆಗಳಿಗೂ ನೆಚ್ಚಿನ ಸ್ಥಳವಾದ ನನ್ನ ಭಾರತ ದೇಶ ನನ್ನ ಹೆಮ್ಮೆ. ಬೆಳಕನ್ನು ತೋರಿಸಿ ಕೊಡುವ ದೇಶ 

ಭಾರತ. 



Rate this content
Log in

Similar kannada story from Abstract