STORYMIRROR

Dr. Gopika, M.H

Romance Fantasy

2  

Dr. Gopika, M.H

Romance Fantasy

ಸಂಧ್ಯಾ ಕಾಲ

ಸಂಧ್ಯಾ ಕಾಲ

1 min
317

ಮುಸ್ಸಂಜೆಯ ಮಬ್ಬಲಿ

ಮಲ್ಲಿಗೆ ಹೂ ಮುಡಿಯಲಿ

ಮುಡಿಸಲೆಂದೆ ಬಂದೆ ಮಡದಿಯೇ

ಮಾತಾಡದೆ ಮೌನವಾದೆಯೇ


ನೀ ನಸು ನಾಚಿ ನಿಂತಿರಲು

ಕೆಂಪೇರಿದೆ ಆ ಮುಗಿಲು

ಮುಪ್ಪಾಗಿ ಮಾಗಿದ ಚೆಲುವು

ಮುಪ್ಪಲ್ಲಿಯೂ ಮಿಗಿಲಾದ ಒಲವು


ಇಳಿ ವಯಸ್ಸಿನ ಕಣ್ಣಗಳು

ಹೊಸ ಕನಸ್ಸಿನ ಗುಂಗಲಿ

ಮನಸ್ಸಿನಲ್ಲೇ ಮಾತನಾಡಿವೆ

ಸವಿ ನೆನಪುಗಳ ಕಲೆಹಾಕಿವೆ


ಆಗಾಗ ಹುಸಿ ಮುನಿಸು

ಕೋಪದಲಿ ಹಸುಗೂಸು

ಮೌನದಲ್ಲೂ ಪಿಸುಮಾತು

ಪ್ರೀತಿಯಲಿ ಶರಣಾಯ್ತು


ಕರಗಿದರು ಈ ಆಯಸ್ಸು

ಒಲುಮೆಯಲಿ ಎಳೆ ವಯಸ್ಸು

ಸಂಗಾತಿ ಜೊತೆಗಿರಲು ಹುಮಸ್ಸು

ಕ್ಷಣ ಕ್ಷಣವು ಬಲು ಸೊಗಸ್ಸು


ಬದುಕಿನ ಬವಣೆಯ ಬದಿಗಿಟ್ಟು

ನಾಳಿನ ಭಯವನು ಬಿಟ್ಟಬಿಟ್ಟು

ಕೇಳೆನ್ನ ಒಲವೇ ಮನಸ್ಸಿಟ್ಟು ಈ ಗುಟ್ಟು

ನಶ್ವರ ಚೆಲುವು ಶಾಶ್ವತ ನಮ್ಮ ಒಲವು


ಕಂಡ ಕನಸ್ಸೆಲ್ಲಾ ಅರಳಿ ಹೂವಾಗಿ

ಮಂದಹಾಸ ಮೂಖದಿ ಮೂಡಿದೆ

ಹುಣಸೆ ಮರಕ್ಕೆ ಮುಪ್ಪಾದರೂ

ಹುಣಸೆ ಹಣ್ಣಿನ ಹುಳಿಗೆ ಮುಪ್ಪೇ ?


Rate this content
Log in

Similar kannada poem from Romance