STORYMIRROR

Dr. Gopika, M.H

Romance Classics Fantasy

4  

Dr. Gopika, M.H

Romance Classics Fantasy

ಮುಂಗಾರು ಮಳೆಯ ಮುತ್ತಿನ ಹನಿ

ಮುಂಗಾರು ಮಳೆಯ ಮುತ್ತಿನ ಹನಿ

1 min
309

ಕರಿಮೋಡ ಕರಗಿತ್ತು

ಮಳೆಯಾಗಿ ಹನಿಯಿಟ್ಟಿತ್ತು 

ಕವಿದ ವಾತಾವರಣ ಸೃಷ್ಟಿ ಮಾಡಿತ್ತು

ಜೋಡಕ್ಕಿ ಗೂಡಲ್ಲಿ ಬೆಚ್ಚಗೆ ಕುಳಿತಿತ್ತು


ಹರ್ಷದಲ್ಲಿ ಆ ನವಿಲ್ಲು

ಥಕಥಕನೆ ಕುಣಿದಿತ್ತು

ನದಿ ತೋರೆಯು ತುಂಬಿತ್ತು

ಧುಮ್ಮಿಕ್ಕಿ ಹರಿದಿತ್ತು


ಕೊಲ್ಮಿಂಚಿನಾ ಸಂಚಲನವು

ಮುಗಿಲತ್ತ ಕಂಡಿತ್ತು

ಗುಡುಗಿನಾರ್ಭಟದ ಶಬ್ದಕ್ಕೆ 

ಇಲಿ ಮೊಲವು ಓಡಿತ್ತ ಬಿಲಗಳನ್ನು ಹೊಕ್ಕಿತ್ತು


ಎಲ್ಲೆಲ್ಲೂ ಹಸಿರಸಿರು

ಜೀವಿಗಳ ಹೊಸ ಉಸಿರು 

ಮೊಳಕೆ ಮರವಾಗುವ ಬಯಕೆ

ಪುಳಕ ಹುಟ್ಟಿಸಿದೆ ಮನಕೆ


ಖಗ ಮೃಗಕೆ ಆನಂದ

ಈ ಜಗವೇ ಬಲುಚಂದ

ಮುಗಾರು ಮಳೆ ತಂದ

ಮುತ್ತಿನನಿಗಳ ಭೂಸ್ಪರ್ಶದಿಂದ


Rate this content
Log in

Similar kannada poem from Romance