ಓ ಅಂತರಾತ್ಮನೇ
ಓ ಅಂತರಾತ್ಮನೇ
ಸಕಲ ಕೋಟಿ ಜೀವರಾಶಿ ಅಂತರಾತ್ಮನೇ
ಸೂರ್ಯ ಕೋಟಿ ಕಿರಣ ನೀನೆ
ಕೀರ್ತಿ ತಂದ ಸತ್ಯ ನೀನೆ ಬಾಳಿಗೆಲ್ಲ ದಾರಿ ನೀನೆ
ದೇವನೇ ವಂದನೆ ನಿನಗೆ ವಂದನೇ
ಭಕ್ತಿಗೊಲಿವ ಶಕ್ತಿ ನೀನೆ ಮುಕ್ತಿಯ ಮುಕ್ಕಣ್ಣ ನೀನೆ
ದೇವನೇ ವಂದನೆ ನಿನಗೆ ವಂದನೇ
ಶಾಂತಿ ನೀನೇ ಸಹನೆ ನೀನೆ ವಿದ್ಯೆಗೊಲಿವ ವಿನಯ ನೀನೆ
ದೇವನೇ ವಂದನೆ ನಿನಗೆ ವಂದನೇ
ತಾಯಿ ತೋರೋ ಮಮತೆ ನೀನೆ ತಂದೆಯ ವಾತ್ಸಲ್ಯ ನೀನೆ
ದೇವನೇ ವಂದನೆ ನಿನಗೆ ವಂದನೇ
ಬಂದುಬಳಗ ಎಲ್ಲ ನೀನೆ ಬಾಳಿಗೆ ಭಾಂದವ್ಯ ನೀನೆ
ದೇವನೇ ವಂದನೆ ನಿನಗೆ ವಂದನೇ
ಹೂವಿಗಿರುವ ಅಂದ ನೀನೆ ಗಾಳಿಗಿರುವ ಗಂದ ನೀನೆ
ದೇವನೇ ವಂದನೆ ನಿನಗೆ ವಂದನೇ
ಬದುಕು ನೀನೆ ಬೆಳಕು ನೀನೆ ಒಲುಮೆಗೊಲಿವ ಒಲವು ನೀನೆ
ದೇವನೇ ವಂದನೆ ನಿನಗೆ ವಂದನೇ
