ಶ್ರಮ ಜೀವಿ ರೈತ
ಶ್ರಮ ಜೀವಿ ರೈತ
ಬಿಡಿಗಾಸು ಕೈಲಿಲ್ಲಾ
ಬಿತ್ತುವುದ ಬಿಡಲಿಲ್ಲ
ಇಳೆಯಲ್ಲಿ ಮಳೆ ಇಲ್ಲ
ಒಣಗೋಯ್ತು ಬೆಳೆಯೆಲ್ಲಾ
ಮರುವರ್ಷ ಬೆಳೆದಾಗ
ತೆನೆ ತುಂಬಿ ನಗುವಾಗ
ಮಳೆ ಸುರಿದು ನಿಲ್ಲಲಿಲ್ಲ
ಕೊಚ್ಚೊಯ್ತು ಬೆಳೆಯೆಲ್ಲಾ
ಹೊಸ ವರಷ ಬಂದಾಗ
ಹೊಸ ಕನಸ ಕಂಡಾಗ
ಕರೋನವು ಬಂತಲ್ಲ
ಜನ ಹೊರಗೆ ಸುಳಿವಿಲ್ಲ
ಹೊಲದಲ್ಲಿ ಆಳಿಲ್ಲ
ಚಲ್ಲೋಯ್ತು ಕಾಳೆಲ್ಲ
ಕೊಳ್ಳೋರೆ ಗತಿಯಿಲ್ಲ
ಕೊಳೆತೋಯ್ತು ಬೆಳೆಯೆಲ್ಲಾ
ಬೆಳೆಗೆಂದೂ ಬೆಲೆಯಿಲ್ಲ
ಸಾಲವೇ ಬದುಕೆಲ್ಲ
ಅದಕವನು ಅಂಜಲ್ಲ
ಛಲವನ್ನು ಬಿಡನಲ್ಲ
ಶ್ರಮತೆಯನು ಮರೆತಿಲ್ಲ
ಘನತೆಯನು ಕೇಳಲ್ಲ
ಜಡತೆಯ ಸುಳಿವಿಲ್ಲ
ಪರಿಶ್ರಮವೇ ಬದುಕೆಲ್ಲ
