STORYMIRROR

Dr. Gopika, M.H

Classics Fantasy Others

2  

Dr. Gopika, M.H

Classics Fantasy Others

ಹೋಳಿ ಆಡೋನೂ ಬಾರ

ಹೋಳಿ ಆಡೋನೂ ಬಾರ

1 min
779

ಹೋಳಿ ಆಡೋನೂ ಬಾರ

ಬಣ್ಣದ ಹೋಳಿ ಆಡೋನೂ ಬಾರ 

ಬಗೆ ಬಗೆ ಬಣ್ಣದ ಓಕುಳಿ ಹರಿಸಿ

ಬದುಕಿನ ಬಣ್ಣದ ಬಾಂಧವ್ಯ ಬೆರೆಸಿ ll


ಸ್ನೇಹವ ಹರಸಿ ದ್ವೇಷವ ಅಳಿಸಿ

ಕಾಮನ ದಹಿಸಿ ಪ್ರೇಮವ ಮೆರೆಸಿ

ನಲಿವನು ಕಲೆಸಿ ನೋವನು ಮರೆಸಿ

ಒಲವನು ಸೇರಿಸಿ ವಿರಹವ ಓಡಿಸಿ


ಬದುಕನು ತುಂಬಿದ ಒಲವಿನ ಬಣ್ಣ

ಮಗುವಿನ ಮೊಗದಲಿ ನಗುವಿನ ಬಣ್ಣ

ಮಾತೆಯ ಮಡಿಲಲ್ಲಿ ಮಮತೆಯ ಬಣ್ಣ

ಅಪ್ಪನ ಹೆಗಲಲಿ ಅಕ್ಕರೆ ಬಣ್ಣ


ಕತ್ತಲೆ ಓಡಿಸೋ ಹುಣಿಮೆ ಬಣ್ಣ

ಬೆಳಗಿನ ಸೂರ್ಯನ ಹೊನ್ನಿನ ಬಣ್ಣ

ಸಂಜೆಯ ಮುಗಿಲಿನ ಕೆಂಪಿನ ಬಣ್ಣ

ಬಿಸಿಲ್ ಮಳೆಯಲ್ಲಿ ಕಾಮನಬಿಲ್ಲಿನ ಬಣ್ಣ


ಅರಳಿದ ಹೂವಲಿ ಚೆಲುವಿನ ಬಣ್ಣ

ಹಾರುವ ಹಕ್ಕಿಯ ಇಂಪಿನ ಬಣ್ಣ

ಚಿಗುರೆಲೆ ಸೊಬಗಿನ ಹಸಿರಿನ ಬಣ್ಣ

ಮಣ್ಣಿನ ಸೊಗಡಿನ ಕಂಪಿನ ಬಣ್ಣ


ಹೋಳಿ ಆಡೋನೂ ಬಾರ

ಬಣ್ಣದ ಹೋಳಿ ಆಡೋನೂ ಬಾರ 

ಬಗೆ ಬಗೆ ಬಣ್ಣದ ಓಕುಳಿ ಹರಿಸಿ

ಬದುಕಿನ ಬಣ್ಣದ ಬಾಂಧವ್ಯ ಬೆರೆಸಿ ll


Rate this content
Log in

Similar kannada poem from Classics