ಸಮತೋಲನ
ಸಮತೋಲನ
ಎಲ್ಲವೂ ಸರಿಯಾಗಿದ್ದರೆ ಬದುಕಿಗೆ
ಅರ್ಥ ಇರುವುದೇ ,
ಕಷ್ಟಗಳೇ ಬಾರದೇ ಸುಖವ
ಸವಿಯಲಾಗುವುದೇ.
ದುಡಿಯುವುದು ಒಂದಿಷ್ಟು
ಉಳಿಸಬೇಕು ಅಷ್ಟಿಷ್ಟು ನಾಳೆಗಾಗಿ,
ಬೇಕು ಬೇಡಗಳೇನಿದ್ದರೂ ಕೈಗೆಟುಕುವಷ್ಟು ಇರಲಿ
ಸಮತೋಲನವಿರಬೇಕು ದುಡಿಮೆಗೂ , ವೆಚ್ಚಗಳಿಗೂ
ಪ್ರೀತಿಯೇ ಆಗಲಿ,
ದ್ವೇಷಿಸಲು ಕಾರಣ ಏನೇ ಇರಲಿ,
ಹೊಂದಾಣಿಕೆ ಅನಿವಾರ್ಯವೇ
ಬದುಕೆಂದರೆ ಬರುವುದೆಲ್ಲವನು
ಸ್ವೀಕರಿಸಿ ಸಮತೋಲನ ಕಾಪಾಡಿಕೊಂಡು
ಉಳಿಸಿಕೊಳ್ಳಬೇಕು ಸಂಬಂಧಗಳನ್ನು
