ಶುಭಾಶಯ ಗೀತೆ
ಶುಭಾಶಯ ಗೀತೆ
ಗುರುಗಳ ಗಣಕೆ ಇದೋ ವಂದನೆ
ನೆರೆದಿಹ ನಿಮಗೆ ಅಭಿನಂದನೆ
ಹರುಷವನ್ನು ತಂದಿದೆ ಈ ಸುದಿನ
ಒಲವಿಂದ ಹಾಡುತಿದೆ ಈ ಮನ || ಪ ||
ಶುದ್ಧ ಸ್ಫಟಿಕ ಬೆಳದಿಂಗಳ ಮನಸು ನಿಮ್ಮದು
ಹಾಲು ಜೇನಿನೊರತೆಯ ನುಡಿಯು ನಿಮ್ಮದು
ಏನೇ ಬರಲಿ ಏನೇ ಇರಲಿ ಎಲ್ಲ ಮರೆಸುವ
ವಿದ್ಯೆ ಕಲಿಸಿ ನಲಿಸುವ ಗುಣವು ನಿಮ್ಮದು || 1 ||
ಮೇಣದಂತೆ ಕರಗಿ ಜ್ಞಾನ ಪ್ರಭೆಯ ಬೀರುವ
ವಿದ್ಯೆ ಪ್ರತಿಭೆಯಿಂದ ಜಗದ ಬದುಕ ಬೆಳಗುವ
ಬುದ್ಧಿಹೇಳಿ ತಿದ್ದಿತೀಡಿ ನಡೆಸಿ ಬೆಳೆಸುವ
ಜೀವನದ ಅಕ್ಷರವ ಬರೆಸಿ ಹರಸುವ || 2 ||
ನಿಮಗೆ ಶುಭವ ಕೋರುತಿರುವ ದಿನದ ಈ ಕ್ಷಣ
ಹೃದಯ ತುಂಬಿ ಹಾಡುತಿರಲು ನೀವೇ ಕಾರಣ
ಮನಸಾರೆ ಹೇಳುವೆನು ಮಿಡಿವ ಮಾತ ನಾ
ಈ ಕವನ ದವನವು ನಿಮಗೆ ಅರ್ಪಣ || 3 ||
