STORYMIRROR

Prajna Raveesh

Abstract Classics Others

4  

Prajna Raveesh

Abstract Classics Others

ಶುಭ ಮುಹೂರ್ತ

ಶುಭ ಮುಹೂರ್ತ

1 min
221

 ಹುಟ್ಟುವಾಗ ಮುಹೂರ್ತವಿಲ್ಲ

 ಸಾಯುವಾಗ ಮುಹೂರ್ತವಿಲ್ಲ

ಜನನ ಮರಣಗಳ ನಡುವಿನಲ್ಲಿ

ಮುಹೂರ್ತ ನೋಡುವವರೇ ಇಲ್ಲಿ!!


ಸ್ವಚ್ಛ ಮನದಿಂದ ಮಾಡಿದ ಕಾರ್ಯಕೆ

ಇಂದಲ್ಲಾ ನಾಳೆ ಜಯ ದೊರಕುವುದು

ನಿಸ್ವಾರ್ಥ ಭಾವದಿಂದ ಮಾಡಿದ ಸೇವೆಗೆ

ಪರಮಾತ್ಮನನ್ನೊಲಿಸುವ ಶಕ್ತಿ ಇಹುದು!!


ಕಾಲ ಕೂಡಿ ಬರಬೇಕು ಕಾರ್ಯವಾಗಲು

ಇಂದಿನ ಬಾಳಿನ ಒಳಿತು ಕೆಡುಕುಗಳೆಲ್ಲವೂ

ಪೂರ್ವಜನ್ಮದ ಕರ್ಮಫಲದನುಸಾರವಾಗಿರಲು 

ಮುಹೂರ್ತವನು ಜರಿದೇನು ಪ್ರಯೋಜನವು?!


ಕಾರ್ಯ ಸಿದ್ಧಿಯಾದೊಡೆ ಶುಭ ಮುಹೂರ್ತವು

ಕಾರ್ಯ ಸಿದ್ಧಿಸದಿದ್ದರೆ ಅಶುಭ ಮುಹೂರ್ತವು

ಶುಭ ಅಶುಭವೆಲ್ಲವೂ ಮನಸ್ಸಿನ ಪರಿಕಲ್ಪನೆಯು

ಕೆಡುಕಾದೊಡೆ ಮುಹೂರ್ತವನು ಜರಿಯುವ ಪರಿಯು!! 


Rate this content
Log in

Similar kannada poem from Abstract