STORYMIRROR

manjula g s

Classics Inspirational Others

4  

manjula g s

Classics Inspirational Others

ಶಾರದೆ

ಶಾರದೆ

1 min
216

ಮುದ್ದುಮುಖದ ದೇವತೆ 

ಬುದ್ಧಿ ಕೊಡುವ ಶಾರದೆ, 

ಲೋಕ ನಿತ್ಯ ಪೂಜಿತೆ 

ಕೃಪೆತೋರು ತಡ ಮಾಡದೆ!


ಹಂಸವಾಹಿನಿಯಾಗಿ ಕುಳಿತೆ 

ವೀಣೆಯ ಕರದಲ್ಲಿ ಹಿಡಿದೆ, 

ನಾರದಮುನಿಯ ಜನ್ಮದಾತೆ

ತ್ರಿದೇವಿಯಾಗಿ ಜಗವ ಪೊರೆದೆ! 


ಸಹಸ್ರನಾಮದ ಶ್ರೀ ಲಲಿತೆ

ಶೃಂಗೇರಿ ಪೀಠದಿ ನೆಲೆಸಿದೆ, 

ಭಕ್ತರ ಕರುಣಿಸೋ ಸಂಪ್ರೀತೆ

ಜ್ಞಾನಾಂಬುಧಿಯನು ತೋರಿದೆ! 


ಶಿರವಬಾಗಿ ನಮಿಪೆ ಮಾತೆ 

ನಿನ್ನನಾಮ ಧ್ಯಾನಿಸುವೆ ಬಿಡದೆ, 

ಸಾಹಿತ್ಯ ಸಂಗೀತಗಳ ಜೊತೆ 

ಮೇಳೈಸಲಿ ಸದಾ ಈ ಜೀವಸುದೆ! 


ನಿನ್ನೊಲುಮೆಯೇ ನಮ್ಮ ಘನತೆ 

ದಯೆತೋರು ನೀನು ತಪ್ಪದೆ,

ವರದಂತೆ ನೀಡು ನಮಗೆ ಮಮತೆ 

ಕೈ ಬಿಡದಿರು ಅನುಕ್ಷಣವು ಮುಂದೆ! 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics