ರಾಜಧಾನಿ
ರಾಜಧಾನಿ
ರಾಜಧಾನಿಯ ಅಂದ ನೋಡಲು
ಮನದಿ ಬಹಳವೆ ತವಕವೂ
ಮಹಡಿ ಕಟ್ಟಡ ಸಾಲುಗಟ್ಟಿದೆ
ಬಾನಿನೆತ್ತರ ಚಾಚಿದೆ ॥
ರಸ್ತೆ ಇಕ್ಕೆಲ ಸಾಲುಕಂಬವು
ಬೀದಿಗೆ ಬೆಳಕ ಚೆಲ್ಲಿದೆ
ಹಗಲು ಇರುಳಿನ ಬೇಧವಿಲ್ಲದೆ
ಚಲನೆ ನಿರತ ವಾಹನಗಳು॥
ಹೂವು ಹಣ್ಣು ಕಾಯಿ ಪಲ್ಲೆ
ಹಾದಿಬೀದಿಯ ತುಂಬಿಕೊಂಡು
ಜನರ ಆಸೆಯ ಅರಿತುಕೊಂಡು
ಕೂಗಿ ಕರೆದವು ಜನರನು॥
ಜನರ ಜಂಗುಳಿ ಸಹಿಸಲಾರದೆ
ಮರಳಿ ಹೊರಟೆನು ಮನೆಯಕಡೆಗೆ
ಪಯಣ ಹೋಗಲು ದೂರದೂರದು
ಬಹಳ ಸುಂದರವೆಂದೆನು॥
