ಪತ್ನಿಯ ತ್ಯಾಗ
ಪತ್ನಿಯ ತ್ಯಾಗ

1 min

3.0K
ಆ ದಿನ ನಾನು ನಿನ್ನೊಂದಿಗೆ ನಡೆದ ಸಪ್ತಪದಿ
ನಮ್ಮ ಜೀವನದ ಹಂತ ಹಂತಕ್ಕೂ ಸ್ಪೂರ್ತಿಯ ಹೆಜ್ಜೆ
ನೀನು ಬೆಳೆದ ವಾತಾವರಣ, ನಡೆದು ಬಂದ ಹಾದಿ,
ಹೆತ್ತವರ ಪ್ರೀತಿ, ಕಂಡ ಕನಸುಗಳು ಎಲ್ಲವನ್ನೂ ಬಿಟ್ಟು
ನನಗಾಗಿ ಬಂದ ಹೆಣ್ಣು ನೀನು
ನೀನು ಕಂಡ ಕನಸುಗಳಲ್ಲಿ ಕೆಲವಾದರೂ
ನನಸಾಗಿಸುವ ಜವಾಬ್ದಾರಿ ನನ್ನದು,
ನಾ ಮನೆಗೆ ಬರಲು ತಡವಾದಾಗ ಹೊತ್ತನ್ನು ಲೆಕ್ಕಿಸದೆ
ಒಬ್ಬಳೇ ಕಾಯುತಿರುವೆ ಮನೆಯಂಗಳದಲ್ಲಿ
ನನ್ನ ಹಸಿವು ನೀಗಿಸುವವರೆಗೂ ನಿನಗೆ
ಊಟ ಸೇರದು ಎಷ್ಟೇ ಹಸಿವಾದರೂ
"ಹೆಂಡತಿ"ಯೇ, ನಿನ್ನ ನಗುವೇ ನನ್ನ ಗುರಿ
ಅದುವೇ ಆಗುವುದು ಇತರರ ಸಂಸಾರಕೆ ಮಾದರಿ .......