STORYMIRROR

MADHURAPRASAD P

Inspirational Others

4  

MADHURAPRASAD P

Inspirational Others

ಜ್ಞಾನದ ವೃಕ್ಷ - ಸಮಾಜದ ರಕ್ಷಕ ನಮ್ಮ ಶಿಕ್ಷಕ

ಜ್ಞಾನದ ವೃಕ್ಷ - ಸಮಾಜದ ರಕ್ಷಕ ನಮ್ಮ ಶಿಕ್ಷಕ

1 min
461


ಓ ಶಿಕ್ಷಕ ನೀನೆ ಈ ಸಮಾಜದ ರಕ್ಷಕ 

ಪ್ರತಿಯೊಬ್ಬರ ಜೀವನದಲ್ಲೂ ಅತಿ ಮುಖ್ಯ ಪಾತ್ರವು ನಿನ್ನದೇ 

ಶಾಲಾ ಕಾಲೇಜು ಎಂದರೆ ಹಲವಾರು ಬಗೆಗಿನ ವಿದ್ಯಾರ್ಥಿಗಳ ಸಮೂಹವೇ ಸರಿ 

ಅವರೆಲ್ಲರನು ನಿಭಾಯಿಸುವ ನಿನ್ನ ಸಹನೆಗೆ ವಂದನೆ ಗುರುವೇ ನಿನಗೆ ವಂದನೆ 

ನಿನಗೆ ತಿಳಿಯದ ವಿಷಯವ ನೀ ಕಲಿತು ಅದರೊಳಗಿನ ಮರ್ಮವ ನೀ ಅರಿತು 

ಅದನು ವಿದ್ಯಾರ್ಥಿಗಳಿಗೆ ಅರ್ಥೈಸುವ ನಿನ್ನ ಕಾಯಕಕೆ

"ಧನ್ಯವಾದ ಶಿಕ್ಷಕ" ನಿನಗೆ ಧನ್ಯವಾದ..... 


ಬಡವ ಮಧ್ಯಮ ಶ್ರೀಮಂತ ಎಂದು ನೋಡದೆ ಎಲ್ಲರನ್ನೂ 

ಸಮನಾಗಿ ಕಾಣುವ ನಿನ್ನ ಗುಣಕೆ ವಂದನೆ ಗುರುವೇ ನಿನಗೆ ವಂದನೆ 

ನೀ ಗುರುವು ಮಾತ್ರವೇ ಅಲ್ಲ ಉದಯ ಬಂದಾಗಿನಿಂದ 

ಪ್ರತಿಯೊಬ್ಬ ವಿದ್ಯಾರ್ಥಿ ಸಂಜೆ ಮನೆಯ ಸೇರುವ ತನಕ 

ಅವರಿಗೆ ಪ್ರತಿ ಹೆಜ್ಜೆ ಹೆಜ್ಜೆಗೂ ಪೋಷಕ ನೀನೇ ರಕ್ಷಕನೂ ನೀನೇ 

ನೀ ಕಲೆಹಾಕಿದ ವಿಷಯಗಳೆಲ್ಲವೂ ಒಂದು ಜ್ಞಾನದ ವೃಕ್ಷವೇ ಸರಿ 

ಮುಂದಿನ ಪೀಳಿಗೆಯ ಭವಿಷ್ಯ ರೂಪಿಸಲು ನೀ ಪಡುವ ಶ್ರಮಕೆ 

ವಂದನೆ ಓ ಗುರುವೇ ನಿನಗೆ ಪಾದಾಭಿವಂದನೆ......  



Rate this content
Log in

Similar kannada poem from Inspirational