ಶಾಂತಿಯ ಸಂಕೇತ ನೀತಿ ನ್ಯಾಯಕೆ ಸ್ಪೂರ್ತಿ- ಮಾನವೀಯತೆಯ ಮೂರ್ತಿ ನಮ್ಮೀ ಭಾರತ ದೇಶ
ಶಾಂತಿಯ ಸಂಕೇತ ನೀತಿ ನ್ಯಾಯಕೆ ಸ್ಪೂರ್ತಿ- ಮಾನವೀಯತೆಯ ಮೂರ್ತಿ ನಮ್ಮೀ ಭಾರತ ದೇಶ


ಶಾಂತಿಯ ಸಂಕೇತ ನೀತಿ ನ್ಯಾಯಕೆ ಸ್ಪೂರ್ತಿ-
ಮಾನವೀಯತೆಯ ಮೂರ್ತಿ ಭಾರತಾಂಬೆಯ ಮಕ್ಕಳು ನಾವು
ಈ ಮಣ್ಣಿನಲಿ ಜನಿಸಲು ಜನುಮ ಜನುಮಗಳ ಪುಣ್ಯವು ಇರಬೇಕು
ಆಂಗ್ಲರ ಗುಲಾಮರಾಗಿದ್ದ ನಾವು
ಅವರಿಂದ ನಮ್ಮ ದೇಶವನ್ನು ಮರಳಿ ಪಡೆದೆವು
ಹಲವಾರು ಮಹಾತ್ಮರ ಹೋರಾಟದಿಂದ
ಅವರಲ್ಲಿ ಹಲವರ ಪ್ರಾಣ ತ್ಯಾಗದಿಂದ..
ಚೋಳ ಚಾಲುಕ್ಯ ಪಲ್ಲವ ಚೇರ ಮೌರ್ಯ
ಇನ್ನಷ್ಟು ಸಾಮ್ರಾಜ್ಯಗಳು ಆಳಿದ ನಾಡಿದು
ಈಗ ಅವೆಲ್ಲವೂ ಹೋಗಿ ಬಂದಿದೆ ನಮ್ಮೀ ಪ್ರಜಾಪ್ರಭುತ್ವ
ಇಷ್ಟಾದರೂ ನಾವು ಬದುಕಲು ಆಗುತ್ತಿಲ್ಲ ಸ್ವಾತಂತ್ರ್ಯದಿಂದ
ಅದು ಕೇವಲ ಹಣ, ಆಸೆ ಹಾಗೂ ನಮ್ಮೊಳಗಿನ ಅಹಂಕಾರವೆಂಬ ಶತ್ರುವುನಿಂದ
ಇನ್ನಾದರೂ ನಾವೆಲ್ಲರೂ ಶ್ರಮಿಸೋಣ ಆ ಮಾತೆಯ ಹೆಸರಿಗೆ ಧಕ್ಕೆ ಬಾರದಿರಲು
ಮಮತೆಗೆ ಸಮವಾದ ಹೆಣ್ಣು ಹಾಗೇ ದೈವಕೆ ಸಮನಾದ ಕೂಸನು ರಕ್ಷಿಸುತಾ
ಮೋಸ , ದ್ವೇಷ, ಅಸೂಯೆಗಳಿಲ್ಲದ ಸ್ವಾತಂತ್ರ್ಯ ದೇಶವು ನಮ್ಮದಾಗಲು...
ಗಡಿಯಲ್ಲಿ ವೈರಿಗಳ ಸದೆಬಡಿದು ನಮ್ಮೆಲ್ಲರ ರಕ್ಷಿಸುವ ಸೈನಿಕರಿಗೊಂದು ಸಲಾಮ್
ಆ ಪ್ರಯತ್ನದಲ್ಲಿ ಹುತಾತ್ಮರಾದವರು ಮತ್ತೇ ಈ ಮಣ್ಣಿನ ಮಕ್ಕಳಾಗಿ ಬರಲು ಆ ದೇವರಿಗೊಂದು ನಮನ
ನೆಲವೆಂದರೆ ನಮ್ಮೀ ಭವ್ಯ ಭಾರತದ ನೆಲ
ಸ್ವೇಚ್ಛೆಯ ಮಿಶ್ರಿತ ಸ್ವಚ್ಛ ಜೀವನ ನಡೆಸುವ ಭಾರತದೆಡೆ ನೋಡಬೇಕು ಜಗವೆಲ್ಲಾ
ಬನ್ನಿ ನಿರ್ಮಿಸೋಣ ಸಾಟಿಯಿಲ್ಲದ ಸ್ವಾತಂತ್ರ್ಯ ದೇಶ ನಮ್ಮೀ ಭಾರತ ದೇಶವನ್ನ......