ತಂಗಿ= ಮೊದಲ ಸ್ನೇಹಿತೆ
ತಂಗಿ= ಮೊದಲ ಸ್ನೇಹಿತೆ


ನಿನ್ನ ಜೊತೆಗಿನ ಹೊಡೆದಾಟ
ಒಂದು ಸಿಹಿಯಾದ ಒಡನಾಟ
ನಾವಿಬ್ಬರೂ ಸೇರಿ ಆಡಿದ ಆಟ
ನನ್ನ ಕಣ್ಣಂಚಿನಲ್ಲಿ ಎಂದಿಗೂ
ಮರೆಯಲಾಗದ ಚಿತ್ರಪಟ
ನಾನು ದಿನವೂ ಕಾಲೇಜು ಮುಗಿಸಿ ಬರಲು
ಗುಟ್ಟಾಗಿ ಕೂಡಿಟ್ಟ ಹಣದಿಂದ ಹಾತೊರೆಯುತಿದ್ದೆ
ನಿನಗಿಷ್ಟವಾದುದೇನಾದರೂ ತರಲು
ಮಾನಸಿಕವಾಗಿ ಕುಗ್ಗಿದ ನನ್ನಲಿ ನೀನು ತುಂಬಿದೆ ಹಠವ
ಇತರರ ಹಾಗೆ ನಾನೇಕೆ ಬದುಕಲ್ಲಿ ಮುಂದೆ ಬಾರಲಾರೆನೆನ್ನುವ ಚಲವ
"ತಂಗಿ" ನೀನೇ ನನ್ನ ಮೊದಲ ಸ್ನೇಹಿತೆ
ಜೀವಮಾನದ ಸ್ನೇಹಿತೆ... ..