ಪ್ರಣಯ
ಪ್ರಣಯ
ಮೌನವ ಮುರಿದು ಬಿಡು ಇನಿಯ
ಇಂದೇಕೊ ತಳಮಳಿಸುತಿದೆ ಹೃದಯ
ನಿಡಿದಾದ ಉಸಿರಿದು ಬಯಸುತಿದೆ ಬೆಸುಗೆಯ
ಆಸೆಗಳ ಪರಿಹಾಸವಾಗಿ ನಿಂತಿಹುದು ಹರೆಯ
ನವಬದುಕ ಕಳೆಗೂಡಿಸಲಿ ನಮ್ಮಿಬ್ಬರ ಮನ
ಕಳೆಯಿಂದ ಕಲೆಯಾಗಿ ಸಾಗಲಿ ದೂರತೀರಯಾನ
ಒಂದಕ್ಕೊಂದು ಬೆಸೆದು ಬಿಡಲಿ ಏಕಾಂತದಿ ನಯನ
ಮೈ ಮನದಲಿ ಪಸರಿಸಲಿ ಸೌರಭದ ದವನ
ಕಣ್ಣಂಚ ಮಿಂಚಿನಲಿ ನಿನ್ನದೆ ನೋಟ
ಚಣ ಚಣವು ಚಡಪಡಿಸಿದೆ ನನ್ನ ಮೈಮಾಟ
ಮತ್ತಷ್ಟು ಬೆಳೆಸದಿರು ಅಗಲಿಕೆಯ ಕೂಟ
ಕಾದಷ್ಟು ಬಿಸಿಯುಗುಳುತಿದೆ ನನ್ನೆದೆಯ ಸಂಕಟ
ಬಿಡುವಿರದ ದುಡಿತಕ್ಕೆ ಮರುಗಿದೆ ಬಾಳು
ನಾಚಿ ನಾಚಿ ಬರೆಯುತ್ತಿದೆ ನಿನ್ನ ಹೆಸರ ಬೆರಳು
ಬಿರಿದ ತುಟಿಯ ಅಂದಕ್ಕೆ ನೀ ಸೋತಿಲ್ಲವೆ ಹೇಳು
ನಮ್ಮಿಬ್ಬರ ಒಗ್ಗೂಡಿಸಲಿ ಈ ಕಗ್ಗತ್ತಲ ಇರುಳು

