STORYMIRROR

ಕೃಷ್ಣ ಪ್ರಿಯೆ ರಾಧೆ

Romance Fantasy Others

3  

ಕೃಷ್ಣ ಪ್ರಿಯೆ ರಾಧೆ

Romance Fantasy Others

ಪ್ರೇಮದ ಸಿಂಧೂ

ಪ್ರೇಮದ ಸಿಂಧೂ

1 min
64


ಅನು ಕ್ಷಣವೂ ನಿನ್ನ ನಾಮದ ರೂಪವೇ

ಮನದ ಮೈದಾನದ ತುಂಬೆಲ್ಲಾ ಹೂವಾಗಿ ಅರಳಿದೆ


ಬಾಡಿದ ಬಳ್ಳಿಯಲ್ಲಿ ನಿನ್ನ ಪ್ರೇಮದ ಪನ್ನೀರ ಚೆಲ್ಲಿ

ನವ ಕುಸುಮವೊಂದು ಮರಳಿ ಜನುಮ ತಾಳಿದೆ


ನಿನ್ನ ಪ್ರೇಮ ಗಂಧ ಚೆಲ್ಲಿದ ಕಡೆಯೆಲ್ಲಾ ಮಮತೆಯ ಮಳೆಯಾಗಿದೆ

ಭೂಮಿಗೂ ನಿನ್ನ ವಾತ್ಸಲ್ಯ ಕಂಡು ಶರಣಾಗುವ ಮನಸಾಗಿದೆ


ಹೋಲಿಕೆ ಇಲ್ಲದ, ಹೋಲಿಸಲು ಆಗದ ಪ್ರೇಮ ಸಿಂಧೂ ನೀನೆಂದು ಮನ ಸಾರಿ ಹೇಳುತಲಿದೆ

ಪ್ರೇಮದ ಪ್ರತಿ ಬಿಂದುವಿನಲ್ಲಿ ನಿನ್ನ ಒಲವಿನ ಮಾಲೆಯ ಕಟ್ಟುವಾಸೆ


ಮಾಲೀಕನಿಗೆ ನನ್ನ ಪ್ರೇಮಾರ್ಪಣೆಯ ಸಲ್ಲಿಸುವ ಬಯಕೆಯ ತುದಿಯಲ್ಲಿ ಮಿಯ್ಯುತಿದೆ ನನ್ನೆದೆಯ ಹಾಡು

ಸ್ವರ ರಾಗದಲ್ಲಿ ಅವನದೇ ಉಸಿರಿನ ಕೊಳಲ ನಾದದ ಸಾರವು ಕೇಳುತಲಿದೆ


ಇಂಪಾಗಿ ಹೊಮ್ಮಿದ ಅಮೃತದ ಸಂಗೀತಕ್ಕೆ ಹೃದಯವೇ ನಾಟ್ಯ ನವಿಲಿನ ರೀತಿ ನರ್ತಿಸುತಲಿದೆ.



Rate this content
Log in

Similar kannada poem from Romance