STORYMIRROR

ಕೃಷ್ಣ ಪ್ರಿಯೆ ರಾಧೆ

Drama Romance Fantasy

3  

ಕೃಷ್ಣ ಪ್ರಿಯೆ ರಾಧೆ

Drama Romance Fantasy

ನಮ್ಮ ಪ್ರೀತಿ ಡಿಫರೆಂಟ್

ನಮ್ಮ ಪ್ರೀತಿ ಡಿಫರೆಂಟ್

1 min
99


ಮನಸ್ಸಿನಲ್ಲಿ ನಿನ್ನದೆ ಬಿಂಬ

ನಿನ್ನ ಬಿಂಬಕೆ ನಾನೇ ಪ್ರತಿ ಬಿಂಬ

ನೀನು ಎಂದರೆ ಏಕೋ ನನ್ನಲ್ಲಿ ಜಂಬ

ನಿನ್ನ ಕಣ್ಣಿಗೆ ನಾನೊಬ್ಬಳೇ ರಂಭ


ಪ್ರೀತಿಸುವೆ ನಿನ್ನೆ ನಾನು ಪ್ರೀತಿಸಿದೆ ನಿನ್ನೆ ನಾನು

ನನ್ನ ಪ್ರೀತಿಗೆ ಕಾರಣ ನೀನು ನನ್ನ ಜೀವಕ್ಕೆ ಚರಣ ನೀನು

ಶ್ವಾಸ ನಿನ್ನಿಂದ ಉಸಿರಿಗೆ ನಿವಾಸ ನಿನ್ನಿಂದ

ಬದುಕಲು ನೀನೆ ಅರ್ಥ ಬದುಕಿಗೆ ನೀನೆ ಸ್ವಾರ್ಥ


ಮೂರು ಅಕ್ಷರದ ಪ್ರೀತಿಗೆ

ಮೂರು ಅಕ್ಷರದ ಉಸಿರನ್ನು ನೀಡುತ್ತಿರುವೆ

ಈ ಜೀವದ ಸ್ವರ್ವಸ್ವಕ್ಕೂ ನೀನೆ ಒಡೆಯ

ನನ್ನ ಜೀವದ ಗೆಳೆಯ, ಪ್ರೀತಿಗೆ ಇನಿಯ


ಲವ್ ಯು ಮುದ್ದು ಬಂಗಾರ

ನನ್ನ ಮುದ್ದು ಇನಿಯ

ದೀಪ ಇಲ್ಲದ ಕತ್ತಲೆ ನೀನಿಲ್ಲದ ನನ್ನೀ ಬಾಳು

ನಿನ್ನಿಂದಲೇ ಪ್ರತಿ ಬೆಳಕು


ನಿನಗಾಗಿ ಜೀವಿಸುವೆ ಪ್ರತಿ ನಿಮಿಷ

ನಿನ್ನ ಪ್ರೀತಿಗಾಗಿ ಕಾಯುವೆ ಪ್ರತಿ ಜನುಮ

ನಿನ್ನಲ್ಲೇ ನನ್ನೆಲ್ಲಾ ಆಸೆ ಕನಸುಗಳು

ಶ್ವಾಸದ ಇನಿಯ ಜೀವದ ಗೆಳೆಯ

ಅರೇ ಕ್ಷಣ ನಿನ್ನ ಕಾ

ಣದೆ ನಾನಿರೇನು.


ಉದಯಿಸುವ ಸೂರ್ಯನಾದೆ ನನ್ನೀ ಬಾಳಿಗೆ,

ಮನವನ್ನು ತಣಿಸುವ ಚಂದ್ರನಾದೆ ನನ್ನೀ ಜೀವಕ್ಕೆ.


ಊರ್ವಶಿ ಸಿಕ್ಕರೂ ಸಿಗಬಹುದು

ರಂಭ ನಾ ಹುಡುಕಿದರೆ ಸಿಗೋದು ಜಂಭ

ಹುಡುಕಿದರೂ ಸಿಗದೆ ಇರೋದು

ನನ್ನ ಅಂತಹ ವಿಚಿತ್ರ ಪ್ರಾಣಿ

ಮುಂದೆ ನೋಡಲ್ಲ ಹಿಂದೆ ನೋಡಿಲ್ಲ

ಪ್ರಪಂಚದಲ್ಲಿ ಸಿಂಗಲ್ ಪೀಸ್

ಉಪೇಂದ್ರನಿಗಿಂತ ಡಿಫರೆಂಟ್


ಅರ್ಥ ಆಗೋದು ನಿಜಕ್ಕೂ ಡೌಟ್

ನೀನು ನನ್ನ ಬಿಟ್ಟು ಯಾರನ್ನೇ ನೋಡಿದರೂ

ಆವತ್ತೆ ನಿನಗೆ ಕಿಕ್ ಔಟ್

ತರಲೆ ಮಾಡಿದರೆ ಕೈಯಲ್ಲಿ ಬ್ಯಾಟ್

ಕೋಪ ಮಾಡಿಕೊಂಡರೆ ನಿನ್ನ ತಲೆ ಮೇಲೆ ಸೌಟ್


ಲವ್ ಯು ಅಂದರೆ ಓಪನ್ ನನ್ನ ಹೃದಯದ ಗೇಟ್

ನಾನು ನಿನಗೆ ಯಾವಾಗಲೂ ಸ್ವೀಟ್

ನಾನು ಮಾತ್ರ ನಿನಗೆ ಕ್ಯೂಟ್

ಬೇರೆ ಎಲ್ಲ ಕಟ್

ನಾನು ನಿನ್ನ ವಿಷಯದಲ್ಲಿ ತುಂಬಾ ಸ್ಟ್ರಿಕ್ಟ್.

ತಮಾಷೆಗಾಗಿ ಹೀಗೊಂದು ಲವ್ ಪ್ರಪೋಸಲ್





Rate this content
Log in