ಪ್ಲಾಸ್ಟಿಕ್ ಮತ್ತು ನಾವು
ಪ್ಲಾಸ್ಟಿಕ್ ಮತ್ತು ನಾವು
ಇಂದು #ಜೂನ್_5 "ವಿಶ್ವ ಪರಿಸರ ದಿನ". ಈ ವರ್ಷದ ಥೀಮ್ #BeatPlasticPollution . ಈ ನಿಟ್ಟಿನಲ್ಲಿ ಒಂದು ಬರಹ
ಇಂದು ವಿಶ್ವ ಪರಿಸರ ದಿನಾಚರಣೆ
"ಬೀಟ್ ಪ್ಲಾಸ್ಟಿಕ್ ಪಲ್ಯೂಷನ್" ಎಂಬುದು ಈ ವರ್ಷದ ವಿಷಯವಾಗಿದೆ..!!
ಪ್ಲಾಸ್ಟಿಕ್ ಬೀಟ್ ಮಾಡುವುದಿರಲಿ ಬಿಟ್ಟುಬಿಡುವುದಕ್ಕೂ ಆಗದ ಪರಿಸ್ಥಿತಿ ನಮಗಿಂದು ನಿರ್ಮಾಣವಾಗಿದೆ..!!
ಮನೆಯ ಇಂಚಿಂಚೂ ಗಮನಿಸಿದಾಗ ಒಂದಲ್ಲ ಒಂದು ರೀತಿಯಲ್ಲಿ ಈ ಪ್ಲಾಸ್ಟಿಕ್ ಇದ್ದೇ ಇರುತ್ತದೆ..!!
ಬೆಳಗ್ಗಿನ ಬ್ರಷ್ ನಿಂದ ಹಿಡಿದು, ನೀರಿನ ಬಾಟಲಿ ತನಕ, ಮಗು ಆಡುವ ಆಟ ಸಾಮಾನಿಂದ,
ಅಮ್ಮ ಹಾಕುವ ಪೌಡರ್ ಡಬ್ಬಿಯ ತನಕ...
ಕೊನೆಗೆ ಅಪ್ಪ ಬರೆಯುವ ಪೆನ್ ತನಕವೂ
ಪ್ಲಾಸ್ಟಿಕ್ ಮಯವಾಗಿಬಿಟ್ಟಿದೆ..!!
ಇವಿಷ್ಟೇ ಅಲ್ಲದೇ ಇಡೀ ಮನೆಯ ಮೂಲೆ ಮೂಲೆಯಲ್ಲೂ ಪ್ಲಾಸ್ಟಿಕ್ ನ ಹಾವಳಿ ಹೆಚ್ಚಾಗಿಬಿಟ್ಟಿದೆ..!!
ಅಂಗಡಿಯಿಂದ ತರುವ ದಿನನಿತ್ಯದ ಸಾಮಗ್ರಿಗಳಿಗೂ ಪ್ಲಾಸ್ಟಿಕ್ ಕವರ್ ನಮಗಿಂದು ಬೇಕಿದೆ...
ಎಷ್ಟೇ ನಿಯಮಗಳನ್ನು ಹೇರಿದರೂ ಪ್ಲಾಸ್ಟಿಕ್ ಕವರಿನ ಬಳಕೆ ಎಗ್ಗಿಲ್ಲದೇ ನಡೆಯುತ್ತಲೇ ಇದೆ...!!
ಇದಕ್ಕೆ ಕಾರಣ ಅಂಗಡಿಯವ ಮಾತ್ರವಲ್ಲ ಕೊಂಡುಕೊಳ್ಳುವ ನಾವೂ ಸಹ ಎಂದು ಗೊತ್ತಿದ್ದರೂ, ತಪ್ಪು ಮರುಕಳಿಸುತ್ತಲೇ ಇದೆ..!!
ಜೀವಸಂಕುಲಕ್ಕೆ ಪ್ಲಾಸ್ಟಿಕ್ ಬಳಕೆ ದಿನದಿಂದ ದಿನಕ್ಕೆ ಮಾರಕವಾಗುತ್ತಲೇ ಇದೆ...
ಅದನ್ನು ತಿಳಿದು, ಜವಾಬ್ದಾರಿಯುತ ನಡೆ ನಮ್ಮೆಲ್ಲರಿಂದ ಆಗಬೇಕಿದೆ..!!
ಒಂದೇ ದಿನಕ್ಕೆ ಸೀಮಿತವಾಗದೇ ಪ್ರತಿದಿನವೂ, ಪ್ರತಿಕ್ಷಣವೂ ಭೂಮಿತಾಯಿಯ ಬಗ್ಗೆ ಕಾಳಜಿ, ಪರಿಸರದ ಬಗ್ಗೆ ಕಳಕಳಿ, ನಮ್ಮೆಲ್ಲರಲ್ಲಿ ಇರಬೇಕಿದೆ..!!
