ಪೌರಾಣಿಕ
ಪೌರಾಣಿಕ
ಜೀವನಕೆ ಬೇಕು ಮೌಲ್ಯ
ಮೌಲ್ಯಗಳಿಗೆ ಆಧಾರ ಪುರಾಣ
ಏಕಾಗ್ರತೆ,ಶ್ರದ್ಧೆ,ನೀತಿಗಳಿಗೆ
ಸಿಗುವುದು ಪಾಠ
ಪೌರಾಣಿಕ ಕಥೆಗಳ ಶ್ರವಣ
ನೀಡುವುದು ಅನೇಕ ಪಾಠ
ಸಿಗದಿದ್ದರೆ ಜೀವನ ಪಾಠ
ಆಗುವುದು ಬಾಳು ನರಕ
ಏಕಲವ್ಯನ ಶ್ರದ್ಧೆ,ಅರ್ಜುನನ ಗುರಿ
ಮನಕೆ ನೀಡುವುದು ಗರಿ
ಸೀತಾರಾಮರ ಬದುಕು
ಕಷ್ಟಪಡುವವರಿಗೆ ಆದರ್ಶವು
ಇದನರಿತು ಭರವಸೆಯ
ಬೆಳಕಿನಂದದಿ ಚಿಗುರೊಡೆದು
ನಯವಿನಯದಿಂದಲೆ
ಬಾಳದಾರಿಯಲಿ ಮನ್ನಡೆ ನೀನು
