ನವರಾತ್ರಿ - 9
ನವರಾತ್ರಿ - 9
ಅಷ್ಟ ದಿನಗಳ ರೂಪಧಾರಿಣಿ
ಸಿದ್ಧಿಧಾತ್ರಿಯೆ ನವಮಿದೇವಿಯು
ಬದುಕ ಸಾಧನೆಯ ಸ್ತರವ ಏರುತ
ಸಿದ್ಧಿ ಪಡೆಯುವ ಕ್ಷಣವದು॥
ಮನದ ಭಯವದು ದೂರವಾಗಲಿ
ಶಾಂತಿ ನೆಮ್ಮದಿ ನೆಲಸಲೀ
ಶುದ್ಧ ಮನದಿ ಭಜಿಪ ಭಕ್ತಗೆ
ದೇವಿ ಅಭಯವ ಕೊಡುವಳು ॥
ಗುಲಾಬಿ ಬಣ್ಣದ ದಿನವು ಇಂದು
ಮನದ ಶುದ್ಧತೆ ನೀಡಿ ನಮಗೆ
ಸಿದ್ಧಿ ಮಾರ್ಗವ ತೋರಿಸು
ಜಯದ ಹಾದಿಯ ಕರುಣಿಸು॥
