STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ನವಿಲಿನ ಹಸಿರು

ನವಿಲಿನ ಹಸಿರು

1 min
341

ಪಂಚರಂಗಿಯ ನವಿಲಿನ ಅಂದ

ಹೊಳೆಯುವ ಹಸಿರಿನ ಬಣ್ಣವೇ ಚಂದ॥

ಹೊಸಹೊಸ ಆಸೆಗೆ 

ಬಣ್ಣವ ಹಚ್ಚಿ

ನನಸನು ಮಾಡಲು

ಮನಸನು ಬಿಚ್ಚಿ

ಹೊರಟಿಹ ತರುಣರ 

ದಂಡನು ಮೆಚ್ಚಿ

ಶುಭವನು ನುಡಿದಿಹ 

ಹಿರಿಯರ ಮನಸು

ಆಸೆಯ ನೋಟವ 

ಬೀರಿಹರು॥

ದೇವರೇ ಬಂದು

ಕರೆದರೂ ಇಂದು

ಹಿಂದಕೆ ಹೆಜ್ಜೆಯನಿಡರೆಂದೂ॥

ಭರವಸೆ ಬೆಳಕನು 

ಹಿಡಿದಿಹ ತರುಣರು

ಮುಂದಕೆ ಮುಂದಕೆ

ಸಾಗುವರು॥

ತಮ್ಮಯ ಗುರಿಯನು

ಸೇರುವರು॥


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics