ನೋವೆ ಜೀವನವಲ್ಲ
ನೋವೆ ಜೀವನವಲ್ಲ
ಜೀವನ ಒಂದು ತಿರುವುಳ್ಳ ಹಳಿ
ಇಲ್ಲಿದೆ ನೋವಿನ ಸಾವಿರ ಸುಳಿ
ಸುಖದಲ್ಲಿರುವಾಗ ಎಲ್ಲರೂ ಬಳಿ
ಅವರು ನೋವಲ್ಲಿ ಇರುವರಾ ತಿಳಿ
ಜೀವನದಲ್ಲಿದೆ ಏರುಪೇರು
ಕೆಲವರು ಇಲ್ಲಿ ಪಾರು ಉಳಿದವರು ಅಲ್ಲೇ ಜಾರು
ಜೀವನವೇ ಒಂದು ಜೋಕರು
ಸೋಲಿಲ್ಲದ ಬಾಳು
ಇರುವುದೇ ನೀ ಹೇಳು
ಏಳು ನೀ ಎದ್ದೇಳು
ಮುಂದೆ ನೀ ತೆರಳು
