ನನ್ನ ಮನಸು
ನನ್ನ ಮನಸು
ನನ್ನ ಮನಸು
ಹೇಳಿದೆ ನಿನ್ನೆಸರ
ಕೇಳಲಾರೆಯಾ ಸಖಿ
ನನ್ನ ಪ್ರಾಣ ಸಖಿ!!
ನಿನ್ನೆಸರ ದ್ವನಿಯಲಿ
ಏನಿದು ಇಂಚರ
ಪ್ರತಿದ್ವನಿಸಿದೆ ನನ್ನ
ಕಿವಿಯಲಿ ಯಾಕೀತರ!
ಉಸಿರುಸಿರಲಿ ಬೆರೆತ
ನೀನೇ ಮಧುರ
ಸೇರಲು ನಿನ್ನನ್ನು
ಯಾಕಿಂತ ಕಾತರ!!
ಬೆಳ್ಳಿ ಮೋಡದಿಂದ
ಇಳಿದು ಬಂದವಳೆ
ದೇವಲೋಕದಿಂದ ಇಳಿದ
ಅಪ್ಸರೆಯಂತೆ ಇರುವವಳೆ!!
ಕನಸಿನ ರಾಣಿ
ನೀನು ನನ್ನವಳೆ
ನನ್ನೀ ಬಾಳಸಂಗತಿಯಾಗಿ
ಬಾಳು ಬೆಳಗುವವಳೆ!!

