ಮತ್ತೆ ಮೌನಿಯಾದೆನೆ!!
ಮತ್ತೆ ಮೌನಿಯಾದೆನೆ!!
ಮನದಿ ಮಾತು ಉಳಿದೆ ಹೋಯ್ತು,
ಮತ್ತೆ ಮೌನಿಯಾದೆನು!!
ನಿನ್ನ ವಿನಃ ಯಾರು ಇಲ್ಲ,
ಕೇಳಲೆನ್ನ ಮಾತನು.
ಮತ್ತೆ ಮತ್ತೆ ಕಾಡುತಿಹುದು,
ನಿನ್ನ ತುಂಟ ಕೀಟಲೆ.
ಯಾಕೊ ಇಂದು ಮೂಡುತಿಹುದು
ಒಂಟಿ ಭಾವ ಮನದಲೆ.
ಮೌನದಿಂದ ಮಾತಿನೆಡೆಗೆ,
ಎಳೆದುತಂದೆ ನನ್ನನೆ.
ಬಿಟ್ಟು ಹೊರಟೆ ನಡುವಿನಲ್ಲಿ,
ಮತ್ತೆ ಮೌನಿಯಾದೆನೆ!!

