ಮರೆತ ನಗು
ಮರೆತ ನಗು
ದಿನನಿತ್ಯದ ಕೆಲಸಗಳ ನಡುವೆ
ಜೀವನದ ಜಂಜಾಟದೊಳಗೆ
ಗೃಹಿಣಿಯಾದಾಕೆ ನಗುವನ್ನೇ
ಮರೆತಿರುವಂತೆ ಆಗಿಹಳಲ್ಲಾ..?!
ಎಷ್ಟೇ ಸಮಯ ಬೇಕೆಂದರೂ,
ಜಾದುವಿನಂತೆ ಹಗಲು-ರಾತ್ರಿ ಮೂಡಿ,
ಆಕೆಗೆ ಸಮಯವೇ
ಇಲ್ಲದಂತೆ ಆಗಿದೆಯಲ್ಲಾ..?!
ಎಷ್ಟೇ ತಾಳ್ಮೆ ತಂದುಕೊಂಡರೂ,
ಅವಳೂ ಮನುಷ್ಯಳಲ್ಲವಾ..?
ತನ್ನ ನೈತಿಕ ಸಿಟ್ಟು, ಕೋಪ ತಾಪಗಳ
ಹೊರಹಾಕದೇ, ಒಳಗೇ ಬಚ್ಚಿಟ್ಟು
ಕುದಿಯುತಿಹಳಲ್ಲಾ..?!
ಎಷ್ಟೇ ಯಂತ್ರದಂತೆ ದುಡಿದರೂ
ಅಳು-ನಗು, ನೋವು-ನಲಿವು,
ಸುಖ-ದುಃಖ ಆಗುವ ಆಕೆಯೂ ಭಾವಜೀವಿಯಲ್ಲವಾ..?!
ಎಷ್ಟೇ ಬೇಸರವಾದರೂ,
ಜೀವನ ಸಾಕೆನಿಸಿದರೂ,
ತನ್ನವರಿಗಾಗಿ ಮತ್ತೊಮ್ಮೆ
ಮಗದೊಮ್ಮೆ ಮೈಕೊಡವಿ
ಎದ್ದು ನಿಲ್ಲುತಿಹಳಲ್ಲಾ..?!
