ಮಳೆಯೇ ನೀನೇಕೆ ಹೀಗೆ..?
ಮಳೆಯೇ ನೀನೇಕೆ ಹೀಗೆ..?
ಮಳೆಯೇ ನೀನೇಕೆ ಹೀಗೆ?
ಒಮ್ಮೊಮ್ಮೆ ಮೆಲ್ಲಗೆ ಬರುವೆ
ಯಾವುದೇ ಸದ್ದಿಲ್ಲದೆ
ಒಮ್ಮೊಮ್ಮೆ ರಭಸವಾಗಿ ಬರುವೆ
ಯಾವುದೇ ಕರುಣೆ ಇಲ್ಲದೆ
ನಿನ್ನ ಈ ಬರುವಿಕೆ
ನನಗೆ ಇಂದೇಕೋ ಖುಷಿ ತರಲಿಲ್ಲ
ನಿನ್ನ ಆಗಮನ
ನನಗೆ ಇಂದೆಕೋ ಉತ್ಸಾಹ ಕೊಡಲಿಲ್ಲ
ನಿನ್ನ ರೌದ್ರ ನರ್ತನ
ನನ್ನ ಕಂಗೆಡುಸುತಿದೆ
ಮಳೆಯೇ ನೀನು ಮನುಷ್ಯನಂತಾದೆಯಾ...?
ಒಮ್ಮೆಮ್ಮೆ ಒಂದೊಂದು ತರ
ಬಣ್ಣ ಬದಲಾಯಿಸುವೆಯಲ್ಲ
ಮಳೆಯೇ ನೀನೆಕೆ ಹೀಗೆ..?
ಅರ್ಥವಾಗದ ಇನಿಯನ ಮನಸ್ಸಿನ ಹಾಗೆ...???
