STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಮಹಿಳೆ

ಮಹಿಳೆ

1 min
5

ಮಗಳಾಗಿ ಸಂತಸದ ಹೊನಲಾಗುವೆ 

ಅಕ್ಕನಾಗಿ ಅಕ್ಕರೆಯ ತೋರುತ

ತಾಯಿಯಾಗಿ ಮಮತೆ ಬೀರುತಾ

ಅತ್ತೆಯಾಗಿ ಅಮ್ಮನ ಸ್ಥಾನ ತುಂಬುತಾ

ಅನುದಿನವು ತುಂಬುವೆ ಚೈತನ್ಯವನು॥೧॥


ಉದ್ಯೋಗ-ವ್ಯವಹಾರ ನೈಪುಣ್ಯವನು 

ಅಧಿಕಾರಿಯಾಗಿ ಸಬಲತೆಯನು

ಮನೆವಾರ್ತೆಯಲಿ ನಾಜೂಕನು 

ಬಲ್ಲಂತಹ ಜಾಣೆ ಇವಳು ॥೨॥


ಅನ್ಯಾಯಕ್ಕೆ ಸಿಡಿದೇಳುವ ಗುಣವಿಹುದು

ಮೌಲ್ಯಕ್ಕೆ ಶಿಕ್ಷಕಿಯ ನೀತಿಗೆ ಮಾದರಿಯು

ನಡತೆ ತಿದ್ದುವ ಶಕ್ತಿ ನೋವಿಗೆ ಮಿಡಿವ ದಾದಿ

ಸಕಲ ಕಲೆಗಳ ಬಲ್ಲ ಕೇಂದ್ರ ಅವಳು ॥೩॥


ಮನದ ಆಸೆಯನು ಕಂಡ ಕನಸನು

ಮರೆಗೆ ಸರಿಸುತ ಮನೆಯ ಮನಗಳ

ಆಸೆ ಪೂರೈಸುವ ಕಾಮಧೇನು ಇವಳು 

ನಾರಿ ಶಕ್ತಿಯಾಗಿ ಪೂಜಿಸುವ ದೇವತೆ ಇವಳು॥೪॥


Rate this content
Log in

Similar kannada poem from Classics