STORYMIRROR

Pushpa Prasad

Romance Classics Others

4  

Pushpa Prasad

Romance Classics Others

ಮೆಚ್ಚಿದೆ ನಾ ಮೆಚ್ಚಿದೆ

ಮೆಚ್ಚಿದೆ ನಾ ಮೆಚ್ಚಿದೆ

1 min
16

ನಿನ್ನ ಅಂದ ನಿನ್ನ ಚಂದ

ನಿನ್ನ ಬಣ್ಣ ನಿನ್ನ ಕಣ್ಣ

ನಿನ್ನ ಮುದ್ದು ಮೊಗದ ಚಂದವ

ಮೆಚ್ಚಿದೆ ನಾ ಮೆಚ್ಚಿದೆ ಮನಸಾರೆ ಮೆಚ್ಚಿದೆ !!

ನಿನ್ನ ನಡೆಯ ನಿನ್ನ ನುಡಿಯ

ನಿನ್ನ ಗುಣವ ನಿನ್ನ ನಡತೆಯ

ನಿನ್ನ ಭಯ ಭಕ್ತಿಯ ಕಣ್ಣಾರೆ ಕಂಡು

ಮೆಚ್ಚಿದೆ ನಾ ಮೆಚ್ಚಿದೆ ಮನಸಾರೆ ಮೆಚ್ಚಿದೆ !!

ನಿನ್ನ ಸೌಮ್ಯತೆ ನಿನ್ನ ಮುಗ್ಧತೆ

ನಿನ್ನ ಸೂಕ್ಷ್ಮತೆ ನಿನ್ನ ಚಿಂತತೆ

ನಿನ್ನ ವಿನಯತೆ ನಿನ್ನ ಘನತೆ ಕಂಡು

ಮೆಚ್ಚಿದೆ ನಾ ಮೆಚ್ಚಿದೆ ಮನಸಾರೆ ಮೆಚ್ಚಿದೆ !!

ನಿನ್ನ ಬುದ್ದಿ ನಿನ್ನ ಚಾತುರ್ಯ

ನಿನ್ನ ಶಿಸ್ತು ನಿನ್ನ ಕೌಶಲ್ಯ

ನಿನ್ನ ಉತ್ಸಾಹದ ಚಿಲುಮೆಯ ಕಂಡು

ಮೆಚ್ಚಿದೆ ನಾ ಮೆಚ್ಚಿದೆ ಮನಸಾರೆ ಮೆಚ್ಚಿದೆ !! 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance