STORYMIRROR

ಚೈತ್ರ ಭಾಗವತ್

Tragedy Inspirational Others

2  

ಚೈತ್ರ ಭಾಗವತ್

Tragedy Inspirational Others

ಮೌನ ತರಂಗಿಣಿ.

ಮೌನ ತರಂಗಿಣಿ.

1 min
159

ಹೆಚ್ಚು ಮಾತನಾಡಿದರೆ

ಅವಳು ಗಂಡುಬೀರಿ.‌

ಎಲ್ಲರೊಡನೆ ಆತ್ಮೀಯತೆಯಿಂದ

ಮಾತನಾಡಿದರೆ,

ಗಮನಿಸುವರು ಅವಳ ನಡತೆಯ ರೀತಿನೀತಿ.

ಮಾತನಾಡದೇ ಇದ್ದರೆ,

ಅವಳು ಜಂಭಗಾತಿ!!

ಅಳತೆ ತೂಗಿ ಮಾತನಾಡಿದರೆ,

ಅವಳು ನಾಟಕಗಾರ್ತಿ.

ಪ್ರತಿಭಟಿಸಿ ಮುನ್ನುಗ್ಗಿದರೆ ಕೇಳುವರು,

ಅವಳ ಜಾತಿಗೀತಿ.

ಹೆಚ್ಚು ನಕ್ಕರೆ,

ತಿಳಿಯುವರು ಅವಳನ್ನು ಸಂಚಾರಿ.

ಎಲ್ಲವನ್ನು ಸಹಿಸಿ ಹೌದ್ಹೌದ್ ಎಂದರೆ

ಮಾತ್ರ ಅವಳು ಸತಿಸಾವಿತ್ರಿ!.

ಹಾಗಾಗಿ,

ಯಾರೂ ಅರ್ಥೈಸಿಕೊಳ್ಳದೆ

ಆಗಿರುವವಳು ಗುಪ್ತಗಾಮಿನಿ.‌

ಮನದ್ದಲ್ಲೇ ಜಗವನು ಉಗ್ರಿಸಿ

ನಗುವ ಮೌನತರಂಗಿಣಿ.

  


Rate this content
Log in

Similar kannada poem from Tragedy