ಮಾನವೀಯತೆ - ಪ್ರಾಣಿಯ ಪ್ರಶ್ನೆ
ಮಾನವೀಯತೆ - ಪ್ರಾಣಿಯ ಪ್ರಶ್ನೆ


ಅಯ್ಯಾ ನನ್ನದಲ್ಲವೇ ಜೀವ,
ನನಗಿಲ್ಲವೇ ಹೆಂಡತಿ, ಮಕ್ಕಳ ಅನುಭಾವ,
ಚರ್ಮ ಹರಿದಾಗ ಆಗೋದು ಅದೆಂಥ ನೋವ,
ನನ್ನ ಕತ್ತರಿಸಿದಾಗ ನಿಮಗಾಗಲ್ಲವೇ ಕಣ್ಣು ತೇವ!!
ಕೇಳಿಸದೇ ನನ್ನ ಅರ್ಥ ನಾದದ ಭಾವ?
ಎಲ್ಲಿದೆ ಮಾನವೀಯತೆಯ ದಯ ?
ನಿಮ್ಮ ಕರುಣೆ, ಅನುಕಂಪ ತೋರಿಕೆಯಾ?
ದಯೆ, ದಾಕ್ಷಿಣ್ಯ ಎಂಬೋದು ಬರೀ ಬೊಗಳೆಯಾ?
ಅಹಿಂಸೆ ಬರೀ ಪಠ್ಯದಲ್ಲಿ ಓದುವ ಪದವಾ?
ಕೇವಲ ನಾಲಿಗೆಯ ಚಪಲಕ್ಕೆ ನನ್ನನ್ನು ಕೊಲ್ಲುವ ನೀವು ಮಾನವರಾ?