ಕವಿತೆ: ನಿಲುಕದ ನಕ್ಷತ್ರ.
ಕವಿತೆ: ನಿಲುಕದ ನಕ್ಷತ್ರ.
ನಿನ್ನ ಜೊತೆ ನಾನು ಜೊತೆಯಾಗಿ,
ಹೆಜ್ಜೆ ಇರಿಸುವ ದಾರಿ ಹಸಿರಾಗಿ,
ಹೂವುಗಳ ಗಂಧ ನವಿರಾಗಿ,
ಹೊಮ್ಮುತ್ತಿರಲಿ ಹಿತವಾಗಿ,
ಇರುವೆ ನಾ ನಿನ್ನ ಬೆಂಗಾವಲಾಗಿ
ಆಸೆ ಕನಸುಗಳು ನೂರು,
ಕಟ್ಟ ಬೇಕಿದೆ ನಮ್ಮಿಬ್ಬರ ಪ್ರೀತಿಯ ಸೂರು,
ಒಂದಾಗಿ ಬಾಳುವ ಯುಗವಿರಲಿ ನೂರು.
ನಾವಿಬ್ಬರೇ ಹೋಗೋಣ ಹತ್ತಿ ಒಲವಿನ ತೇರು..
ನೋಡುವ ಆಸೆ ಊರು ಹಲವಾರು.
ಆಗಾಗ ಕಣ್ಮುಂದೆ ಸುಳಿದಾಡಿ,
ಹೊತ್ತಿಸಿದೆ ನೂರಾಸೆಯ ಕಿಡಿ,
ಬಿಡದೆ ನನ್ನ ಕೈಯನ್ನು ಹಿಡಿ,
ಕಾದಿರುವೆ ಏರಲು ನಿನ್ನ ಮುಡಿ
ಎಂದೆಂದೂ ನೀಎನ್ನ ಜೀವನಾಡಿ.
ಕಂಡಿರುವೆ ಏನೇನೋ ಕನಸು,
ನಿನಗೂ ಇದೆ ನನ್ನಂತೆ ಮನಸ್ಸು,
ಎಂದೆಲ್ಲಾ ಕಂಡಿದ್ದು ಬರೀ ಹಗಲುಗನಸು,
ಇಂದು ಅರಿತಾಗ ನಿನ್ನ ಮನಸ್ಸು.
ತಿಳಿಯಿತು ನಿನಗಿಲ್ಲ ಒಲವಲ್ಲಿ ಒಮ್ಮನಸು.
ತಿಳಿದೆ ನಾ ನೀನೆನಗೆ ನಿಲುಕದ ನಕ್ಷತ್ರ,
ಬೇರೊಬ್ಬಳಿಗೆ ನೀನಾಗಿರುವೆ ಹತ್ರ,
ಕಟ್ಟಲು ಹೊರಟಿರುವೆ ಮಂಗಳಸೂತ್ರ,
ನಿಮ್ಮಿಬ್ಬರ ಬದುಕಾಗಲಿ ಸುಸೂತ್ರ.
ಎಂದು ಬೇಡುವೆನು ನಾನು ದೇವರ ಹತ್ರ.
ಧನ್ಯವಾದಗಳು💐

