ಕರೋನದ ಪರಿಕಲ್ಪನೆ
ಕರೋನದ ಪರಿಕಲ್ಪನೆ


ಕರೋನದ ಅಲೆ,
ಪ್ರಕೃತಿಯಲ್ಲಿ ಬಲೆ,
ಸಿಗುವುದಾ ದೇವನಿಂದ ನೆಲೆ...
ಜನನಿ ಜನ್ಮ ಭೂಮಿಶ್ಚ,
ಮಾತಾ-ಪಿತಾ ನಮೋ ನಮಃ
ಬುದ್ದಾಂ ಶರಣಂ ಗಚ್ಛಾಮಿ,
ಧರ್ಮೋ ಧರ್ಮ: ರಕ್ಷತಿ ರಕ್ಷತಃ,
ಮನೆಯೇ ಮಂತ್ರಾಲಯ:
ಮನಸೇ ದೇವಾಲಯ:,
ಪಾಪದ ಫಲವೋ,
ಪುಣ್ಯದ ಫಲವೋ,,
ಕರೋನದ ಎಲ್ಲೆಲ್ಲೂ ಬಲೆಯೋ
ನರ ಮಾನವರ ನರಕನೋ,
ಮನುಕುಲದ ಕರ್ಮಗಳ ಅಘೋರ ಕೃತ್ಯನೋ
ಮಿತಿಮೀರಿ ಹೋದ ಸ್ವಾರ್ಥನೋ
ಕಂಗೆಟ್ಟುಹೋದ ಆಸೆ-ದುರಾಸೆನೋ
ಕ್ಷಮಿಸಲು ಅನರ್ಹವಾದ ಜೀವನವೋ
ದಯಾಪಾಲಿಸುತ್ತಿಲ್ಲವೆ ಕರುಣೆಯನು ಭಗವಂತನೋ
ಪ್ರೀತಿ-ಸ್ನೇಹದ ವಿಶ್ವಾಸದಲ್ಲಿ ಅವಿಶ್ವಾಸನೋ
ನಂಬಿಕೆಯಲ್ಲಿ "ದ್ರೋಹ"ದ ಪರಿಕಲ್ಪನೆಯೋ
ಬಂಧುಗಳ ಬಂಧುತ್ವದಲಿ ಮೋಸನೋ
ಕುಟುಂಬದ ಸಂಬಂಧದಲ್ಲಿ ಅಪನಂಬಿಕೆಯೋ
ಸಂಘ-ಸಮಾಜದಲ್ಲಿ ಅವಹೇಳನವೋ
ಆತ್ಮೀಯರಿಂದ ಅಪಮಾನವೋ
ನಾ ಎಲ್ಲಿರುವೆ ಎಂದು ತಿಳಿಯನೇ
ನನ್ನವರಲ್ಲಿ ನಾನೊಬ್ಬ ಎಂದು ತಿಳಿದೆನೇ
ಭಯದ ಪ್ರಕೃತಿಯನ್ನು ಸೃಷ್ಟಿಸಿದ ಭಗವಂತನೋ
ಇತಿಹಾಸ ನಿರ್ಮಿಸಲು ಮುಂದಾದ ಜೆಂಗ್ಲಿಯೋ
ಔಷಧ ವಂಚಿತ ಕರೋನ ರೋಗವೋ,
ನೋವು-ಸಾವು ಒಯ್ಯುತ್ತಿರುವ ಕರೋನವೋ
ಕರೋನದ ಬಂಧನದಿಂದ ಬಿಡುಗಡೆ ಆಗುವುದಿಲ್ಲವೋ ಮುಕ್ತಿ,
ಸರ್ವನಾಶ ವಾಗುವುದೋ ಕರೋನದಿಂದ "ಪ್ರಕೃತಿ".......
ಸರಿ ಇದ್ದರೆ ಸ್ವೀಕರಿಸಿ ಮಾನವ,
ತಪ್ಪಿದ್ದರೆ ಸರಿಪಡಿಸಿ ನಡೆಯೋ ಕೇಶವ.