ಕನಸಿನ ಕುದುರೆ
ಕನಸಿನ ಕುದುರೆ
ಕನಸಿನ ಕುದುರೆಯನೇರಿ
ಸಾಗುತಿವೆ ಸಾವಿರಾರು ಬಯಕೆಗಳು
ಕಾಣದ ಗುರಿಯನು ಅರಸುತ
ಹಾದಿಯಲಿವೆ ಕಲ್ಲು ಮುಳ್ಳುಗಳು
ಹಾಸಿಲ್ಲ ಹೂವಿನ ದಳಗಳನು
ಸಾಗಲಬೇಕು ಹಾರುತ, ಓಡುತ
ಕನಸೆಂಬುದು ತುರಗವಾಗಿ ಓಡಲು
ಬೇಸರವು ಅದರ ಹಿಂದೆ ಬರುತಿರಲು
ಆಸೆಗಳು ಬಿಕ್ಕುತ್ತಿವೆ ಮೆಲ್ಲಗೆ ಬಾಡುತ
ನನಸು ಮಾಡುವ ಕನಸನಷ್ಟೇ ಕಾಣಬೇಕು
ನಿದಿರೆಯಲ್ಲಿ ಕಂಡ ಕನಸುಗಳು
ಬರಿ ಭ್ರಮೆಗಳು , ನೋವಾಗಿ ಉಳಿವವು ಕಾಡುತ
