STORYMIRROR

Prajna Raveesh

Abstract Inspirational Others

4  

Prajna Raveesh

Abstract Inspirational Others

ಕೆಸರಿನಲ್ಲಿ ಅರಳಿದ ಕಮಲ

ಕೆಸರಿನಲ್ಲಿ ಅರಳಿದ ಕಮಲ

1 min
245

ಕೆಸರಿನಲ್ಲಿ ಅರಳಿದ ಕಮಲವಾದರೂ ನೀನು

ಚಂದದ ನಗೆಯ ಬೀರಿ ಕಂಪನು ಸೂಸುವೆ

ನಿನ್ನನು ನೋಡುತಲೇ ಮೂಕವಿಸ್ಮಿತ ನಾನು

ಹೃನ್ಮನದಲಿ ನವಿರಾದ ಭಾವವನು ಮೂಡಿಸುವೆ!!


ಅಂದದ ನಗುವಿನಲಿ ದುಂಬಿಗಳ ಸೆಳೆಯುವೆ ನೀನು

ಬರ ಸಿಡಿಲು, ಬಿಸಿಲು, ಮಳೆ, ಗಾಳಿಗೂ ಅಂಜದಿರುವೆ

ನಿನ್ನ ನೋಡಿ ಕಲಿಯಲಿದೆ ಜೀವನ ಪಾಠವ ನಾನು

ಕಷ್ಟಗಳನು ಧೈರ್ಯದಲಿ ಎದುರಿಸಬೇಕೆಂದು ಹೇಳುವೆ!!


ಕೊಳಚೆಯಲ್ಲಿ ಹುಟ್ಟಿ ಅಲ್ಪಾಯುಷಿಯಾದರೂ ನೀನು

ಇರುವಷ್ಟು ದಿನವೂ ಖುಷಿಯಾಗಿರಬೇಕೆಂದು ತಿಳಿಸುವೆ

ನಿನ್ನ ನೋಡುತಲೇ ಖುಷಿ ಪಡುವ ಮನದವಳು ನಾನು

ನಾಲ್ಕು ದಿನಗಳ ಜೀವನದಲಿ ಕೂಡಿ ಬಾಳಿ ಬದುಕುವೆ!!


Rate this content
Log in

Similar kannada poem from Abstract