STORYMIRROR

Achala B.Henly

Abstract Classics Children

4  

Achala B.Henly

Abstract Classics Children

ಕಾಮನಬಿಲ್ಲು

ಕಾಮನಬಿಲ್ಲು

1 min
223

]ನೀಲಾಕಾಶದಿ ಮಳೆಹನಿ ಮೂಡುತಿರಲು ರವಿಕಿರಣಗಳೊಂದಿಗೆ ಸಮ್ಮಿಲನವಾಗಲು

ಬಣ್ಣಬಣ್ಣದ ಕಾಮನಬಿಲ್ಲು ಉದಯಿಸಲು

ಪ್ರಕೃತಿಯೇ ಜೀವ ತಳೆಯಿತು ನೋಡು!!


ನಿಸರ್ಗದ ಮಡಿಲಲ್ಲಿ

ನಮ್ಮ ಮನೆಯಂಗಳದಿ 

ನಮ್ಮಿಬ್ಬರ ಪುಟ್ಟ ಕಂದನು

ಸಂತಸದಿ ಆಡಿದ ನೋಡಿಲ್ಲಿ!!


ನಮ್ಮೆಲ್ಲರ ಪುಟ್ಟ ರತ್ನನಿವ

ಮನೆಮಂದಿಗೆ ಮುದ್ದು ಕಂದನಿವ

ಇವನಿಲ್ಲದೇ ನಾವಿಲ್ಲ,

ನಮ್ಮ ಬದುಕೇ ಇವನಿಂದಲ್ಲವಾ?!


ಮಳೆಬಿಂದು ಸೂರ್ಯರಶ್ಮಿಗಳು ಒಂದಾಗಲು ಆಕಾಶದಿ ಕಾಮನಬಿಲ್ಲು ಉದಯಿಸಿತು

ನಮ್ಮಿಬ್ಬರ ಪ್ರೀತಿಯ ಸಂಗಮವಾಗಲು ಕಾಮನಬಿಲ್ಲಿನಂಥ ಕಂದನು ಜನ್ಮ ತಾಳಿದನು!!



Rate this content
Log in

Similar kannada poem from Abstract