ಕಾಲ
ಕಾಲ
ಕಾಲವೇ ಹಾಗೆ...
ಬೇಕಿರಲಿಲ್ಲ ಅದಕೆ
ವ್ಯಕ್ತಿ-ಶಕ್ತಿ-ಅವಕಾಶ l
ಕಾಯಲಾರದು ಅದು
ಕಾರ್ಯಗಳ
ಬೇಡಿಕೆ ಪಟ್ಟಿಗಾಗಿ ..l
ಉರುಳಲೇಬೇಕು..
ನಿಂತರೆ ಮುಗಿಯಿತು
ಬರಬಹುದು ಮನುಷ್ಯ
ಒಳೊಪ್ಪಂದಕ್ಕೂ...l
ಅದರ ಪಾಡಿಗೆ ಅದು
ಹೋಗಲಿ..l
ಮನುಷ್ಯ
ಸಮಯದ ಗೊಂಬೆಯಷ್ಟೇ l
ಸ್ಬೀಕಾರ ಪ್ರತೀಕಾರ
ಬೇಕಿಲ್ಲ ಅದಕೆ..l
ದೇವರೂ ತಡೆಯಲಾರ..
ಉರುಳುವುದೇ
ಸತ್ಯ..ll
