ಜೊತೆಜೊತೆಯಲಿ
ಜೊತೆಜೊತೆಯಲಿ
ನಿನ್ನ ಕನಸಿನ ಚಿತ್ತಾರಕೆ ನಾನಾಗುವೆ ಒಲವಿನ ಬಣ್ಣ
ಬಿಡಿಸು ನೀ ನಲುಮೆಯ ಕಾಮನ ಬಿಲ್ಲನು
ನಿನ್ನ ಜೀವನದ ಗಾಳಿಯ ಪಟಕೆ ನಾನಾಗುವೆ ಕಾಣದ ಸೂತ್ರ
ಮೇಲೇರು ನೀ ಬೇಧಿಸುತ ಬಿರುಗಾಳಿಯನು
ನಿನ್ನದೊಂದು ಹೆಜ್ಜೆಯೊಡನೆ ನನ್ನದೊಂದು ಹೆಜ್ಜೆಯನಿಡುವೆ
ನಡೆದುಬಿಡು ನೀ ಕೊನೆವರೆಗು ಬಿಡದೇ ಈ ನನ್ನ ಕೈಯನು